ಕ್ರೀಡೆ

ಟೆಸ್ಟ್ ಬೌಲರ್ ಗಳ ರ್ಯಾಂಕಿಂಗ್ ಪಟ್ಟಿ: 3ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಬುಮ್ರಾ

ಕಿಂಗ್ಸ್ಟನ್,ಸೆ.3-ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಬಿಡುಗಡೆ ಮಾಡಿರುವ ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಕ್ರಿಕೆಟ್ ತಂಡದ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

ಬುಮ್ರಾ ನಾಲ್ಕು ಸ್ಥಾನಗಳ ಭರ್ಜರಿ ನೆಗೆತ ಕಂಡು ಮೂರನೇ ಸ್ಥಾನದಲ್ಲಿದ್ದಾರೆ. ಬುಮ್ರಾ 835 ರೇಟಿಂಗ್ ಪಾಯಿಂಟ್ಗಳನ್ನು ಹೊಂದಿದ್ದಾರೆ. ಅಲ್ಲದೆ ದ್ವಿತೀಯ ಸ್ಥಾನದಲ್ಲಿರುವ ರಬಡಗಿಂತಲೂ 16 ಪಾಯಿಂಟ್ಗಳ ಅಂತರವನ್ನು ಹೊಂದಿದ್ದಾರೆ

ರ್ಯಾಂಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಅಗ್ರಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾದ ಕಗಿಸೋ ರಬಡ ದ್ವಿತೀಯ ಸ್ಥಾನದಲ್ಲಿದ್ದಾರೆ

ಇನ್ನೊಂದೆಡೆ ಬ್ಯಾಟಿಂಗ್ ಪಟ್ಟಿಯಲ್ಲಿ ಅಜಿಂಕ್ಯ ರಹಾನೆ ಏಳನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಆದರೆ ಚೇತೇಶ್ವರ ಪೂಜಾರ ರ್ಯಾಂಕಿಂಗ್ ನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ

ಐಸಿಸಿ ಟಾಪ್ 5 ಬೌಲಿಂಗ್ ರ್ಯಾಂಕಿಂಗ್ ಪಟ್ಟಿ ಇಂತಿದೆಪ್ಯಾಟ್ ಕಮಿನ್ಸ್ 908, ಕಗಿಸೋ ರಬಡ 851, ಜಸ್ಪ್ರೀತ್ ಬುಮ್ರಾ 835, ಜೇಸನ್ ಹೋಲ್ಡರ್ 814, ಜೇಮ್ಸ್ ಆಂಡ್ರೆಸನ್ 814. (ಎಂ.ಎನ್)

Leave a Reply

comments

Related Articles

error: