ಮೈಸೂರು

ಬರ ಪರಿಸ್ಥಿತಿಯಲ್ಲಿ ಜನತೆ ಹಾಗೂ ಜಾನುವಾರು ರಕ್ಷಣೆಗೆ ಸರ್ಕಾರದಿಂದ ಪ್ರಾಮಾಣಿಕ ಪ್ರಯತ್ನ : ಡಾ.ಹೆಚ್.ಸಿ.ಮಹದೇವಪ್ಪ

ರಾಜ್ಯದಲ್ಲಿ ಎಂದೂ ಕಂಡರಿಯದಂತಹ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು.  ನಾಗರೀಕ ಸರ್ಕಾರವೆನಿಸಿರುವ ರಾಜ್ಯದ ಕಾಂಗ್ರೇಸ್ ನೇತೃತ್ವದ ಸರ್ಕಾರ  ಜನತೆ ಹಾಗೂ ಜಾನುವಾರುಗಳ ರಕ್ಷಣೆಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ ಎಂದೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ತಿಳಿಸಿದರು.

ಕೆ.ಆರ್.ನಗರ ತಾಲೂಕಿನ ಚುಂಚನಕಟ್ಟೆಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಮಾವತ್ತೂರು ಮತ್ತು 33 ಗ್ರಾಮಗಳಿಗೆ   ಕಾವೇರಿ ನದಿಯಿಂದ ಬಹುಗ್ರಾಮ ಕುಡಿಯುವ ಶುದ್ದ ನೀರು ಪೂರೈಕೆ  ಯೋಜನೆಯ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.  ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ  ಪಕ್ಷಾತೀತವಾಗಿ ಕಾರ್ಯನಿರ್ವಹಿಸಲಾಗುತ್ತಿದ್ದು  ನಮಗೆ ಪಕ್ಷಕ್ಕಿಂತ ಜನತೆಯ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸುವುದೇ ಮುಖ್ಯವಾಗಿದ್ದು ಅಧಿಕಾರದಿಂದ ಕೆಳಗಿಳಿದ ಕೂಡಲೇ ಟೀಕಿಸುವುದನ್ನು ಬಿಟ್ಟು ಸಮಾನತೆಯ ರಾಜ್ಯ ಸಾರ್ವಜನಿಕ ಕಾರ್ಯ. ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಮಾತ್ರ ಸಂವಿಧಾನದ ಆಶಯಗಳು ಈಡೇರಲಿದೆ ಎಂದರು.

ಮುಂದಿನ ಒಂದು ವರ್ಷದೊಳಗೆ ಅಂದಾಜು109 ಕೋಟಿ  ರೂ.ವೆಚ್ಚದಲ್ಲಿ  ಕೆ.ಆರ್.ನಗರ ತಾಲೂಕಿನ 189 ಗ್ರಾಮಗಳಿಗೆ 10 ಬಹುಗ್ರಾಮ ಕುಡಿಯುವ ನೀರಿನ  ಯೋಜನೆಗಳ ಮೂಲಕ ಶುದ್ದ ನೀರನ್ನೂ ಪೂರೈಕೆ ಮಾಡಲಾಗುವುದೆಂದರು .   ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಸಾ.ರಾ. ಮಹೇಶ್ ವಿರೋಧ ಪಕ್ಷದ ಶಾಸಕನಾಗಿದ್ದರೂ ಹಿಂದಿನ ಜನತಾ ಪರಿವಾರದ ಸಂಬಂಧವನ್ನೂ ಮರೆಯದೇ ಕೆ.ಆರ್.ನಗರ ತಾಲೂಕಿನ ರಸ್ತೆ, ಕುಡಿಯುವ ನೀರಿನ ಯೋಜನೆಗಳಿಗೆ ಮಂಜೂರಾತಿ ನೀಡಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುತ್ತಿರುವ ಮಹದೇವಪ್ಪನವರು ಇದೇ ರೀತಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಪಡಿತರ ಅಕ್ಕಿ,ಸೀಮೆಎಣ್ಣೆ ಪ್ರಮಾಣ ಹೆಚ್ಚಿಸಬೇಕು ಹಾಗೂ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಅರಂಭಕ್ಕೆ ಸಹಕಾರ ನೀಡುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತ್ ಅಧ್ಯಕ್ಷೆ ನಯೀಮಾ ಸುಲ್ತಾನಾ, ಸದಸ್ಯರುಗಳಾದ ವೀಣಾ, ಅಚ್ಚುತಾನಂದ,ರವಿಶಂಕರ್  ತಾ.ಪಂ. ಅಧ್ಯಕ್ಷ ಮಂಜುನಾಥ್, ಸದಸ್ಯರುಗಳಾದ ಲೋಕೇಶ್, ಚಂದ್ರಶೇಖರ್, ಮಮತಾ,ರತ್ನಮ್ಮ , ಜಿ.ಪಂ.ಮಾಜಿ  ಸದಸ್ಯ ದ್ವಾರಕೀಶ್,ಎ.ಟಿ.ಸೋಮಶೇಖರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

Leave a Reply

comments

Related Articles

error: