ಮೈಸೂರು

ವಿದೇಶಿ ಮಹಿಳೆಯೋರ್ವರ ಮೇಲೆ ಲೈಂಗಿಕ ದೌರ್ಜನ್ಯ

ಪ್ರವಾಸಕ್ಕೆ ಬಂದಿದ್ದ ಜರ್ಮನಿ ಮೂಲದ ಮಹಿಳೆಯೋರ್ವರ ಮೇಲೆ ವ್ಯಕ್ತಿಯೋರ್ವ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ಮೈಸೂರಿನ ಚಾಮುಂಡಿ ಬೆಟ್ಟದ ಮೆಟ್ಟಿಲು ಬಳಿ ನಡೆದಿದೆ.

ಸೋಮವಾರ ಸಂಜೆ 7.30ರ ಸುಮಾರಿಗೆ ಜರ್ಮನಿ ಮೂಲದ ಮಹಿಳೆ ಚಾಮುಂಡಿಬೆಟ್ಟದ ಮೆಟ್ಟಿಲುಗಳ ಮೂಲಕ ಕೆಳಗೆ ಇಳಿಯುತ್ತಿದ್ದಂತೆ ಯುವಕನೋರ್ವ ಆಕೆಯ ಬಳಿ ಬಂದು ಅಸಭ್ಯವಾಗಿ ವರ್ತಿಸಿದ್ದಾನೆ. ಆಕೆಯ ಮೇಲೆರೆಗಿದ ಯುವಕ ಬಲವಂತವಾಗಿ ಆಕೆಯನ್ನು  ಚುಂಬಿಸಿ,  ಆಕೆಯ ಮೈ ಕಚ್ಚಿ, ಆಕೆಯ ಬಳಿ ಇದ್ದ ಎರಡು ಸಾವಿರ ರೂ.ನಗದನ್ನು ಕಸಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.   ಈ ಮಹಿಳೆ 3 ತಿಂಗಳ ವೀಸಾದಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದು, ಶುಕ್ರವಾರ ಮೈಸೂರಿಗೆ ಆಗಮಿಸಿದ್ದು ಸ್ಥಳಿಯ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದರು. ಘಟನೆ ಕುರಿತು ಮೈಸೂರಿನ ಕೆ.ಆರ್.ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ.

ಪೊಲೀಸರು ಮೆಟ್ಟಿಲುಬಳಿ ಹೋಗಿ ಬರುವವರನ್ನೆಲ್ಲ ವಿಚಾರಣೆಗೊಳಪಡಿಸುತ್ತಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಬೆಂಗಳೂರು ಇತ್ತೀಚೆಗೆ ಯುವತಿಯರಿಗೆ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತುಗಳು ಕೇಳಿ ಬರುತ್ತಿತ್ತು. ಇದೀಗ ಮೈಸೂರಿನಲ್ಲಿ ಇಂತಹ ಹೇಯ ಕೃತ್ಯ ನಡೆದಿದ್ದು, ಮೈಸೂರು ಸುರಕ್ಷಿತವಲ್ಲವೇನೋ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ.

Leave a Reply

comments

Related Articles

error: