ಪ್ರಮುಖ ಸುದ್ದಿಮೈಸೂರು

ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಬಂಧಿಸಲಾಗಿದೆ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ

ಮೈಸೂರು,ಸೆ.4:- ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಡಿಕೆ ಶಿವಕುಮಾರ್ ರನ್ನು ಬಂಧಿಸಲಾಗಿದೆ ಎಂದು  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಆರೋಪಿಸಿದ್ದಾರೆ.

ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು ಬಿಜೆಪಿ ಪಕ್ಷ ತಮ್ಮ ಎದುರಾಳಿ ಪಕ್ಷದ ನಾಯಕರನ್ನು ಮಣಿಸಲು ಈ ತಂತ್ರ ಹೂಡಿದೆ. ಈ ತಂತ್ರಕ್ಕೆ ಕಾಂಗ್ರೆಸ್ ಪಕ್ಷ ಬಗ್ಗುವುದಿಲ್ಲ. ರಾಜಕೀಯವಾಗಿ ಯಾರನ್ನೂ  ಸಹ ಮುಗಿಸಲು ಸಾಧ್ಯವಿಲ್ಲ.  ನಾಲ್ಕು ದಿನ ವಿಚಾರಣೆ ನಡೆಸಿದಾಗ ಉತ್ತರ ಕೊಡದವರು ಈಗ ಬಂಧನ ಮಾಡ್ಬಿಟ್ರೆ ಉತ್ತರ ಕೊಡ್ಬಿಡ್ತಾರಾ ಹೇಳಿ ? ಚಿದಂಬರಂ ಹಾಗೂ ಡಿಕೆಶಿ ಕೇಸ್ ಗಳು ಬೇರೆ ಬೇರೆ, ಆದರೆ ಅವರಿಬ್ಬರ ಬಂಧನ ರಾಜಕೀಯ ಪ್ರೇರಿತ.  ಯಡಿಯೂರಪ್ಪಗೆ ಗೊತ್ತಿಲ್ಲದೆ ಅರೆಸ್ಟ್ ಮಾಡ್ತಾರಾ. ಯಡಿಯೂರಪ್ಪಗೆ ಗೊತ್ತಿದ್ದೇ ಅರೆಸ್ಟ್ ಆಗಿದೆ. ಯಡಿಯೂರಪ್ಪ ರಾಜಕೀಯವಾಗಿ ನನಗೆ ಗೊತ್ತಿಲ್ಲ ಎಂದು ಸುಮ್ಮನೆ ಹೇಳುತ್ತಿದ್ದಾರೆ ಅಷ್ಟೆ. ಅವರ ಪಕ್ಷವೇ ಬಂಧಿಸಿರುವ ಕಾರಣ ಅವರಿಗೆ ಮಾಹಿತಿ ಇದ್ದೇ ಇದೆ ಎಂದು  ಗಂಭೀರ ಆರೋಪ  ಮಾಡಿದರು.

ನಾಲ್ಕು ದಿನ ವಿಚಾರಣೆ ಮಾಡಿ ಉತ್ತರ ಪಡೆಯದವರು ಈಗ ಬಂಧಿಸಿ ಹೇಗೆ ಉತ್ತರ ಪಡೆಯುತ್ತಾರೆ. ಕಾಂಗ್ರೆಸ್ ಶಕ್ತಿಯನ್ನು ಕುಗ್ಗಿಸುವ ಉದ್ದೇಶದಿಂದಲೇ ಈ ಬಂಧನವಾಗಿದೆ. ಡಿ.ಕೆ.ಶಿವಕುಮಾರ್ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆ ಮಾಡಲಿದೆ. ಗುಜರಾತ್ ಶಾಸಕರನ್ನ ನೀವು ಹಿಡಿದಿಟ್ಟುಕೊಂಡಿದ್ದು ಏಕೆ ಎಂದು ಇಡಿ ಡಿಕೆಶಿಯವರನ್ನು ಪ್ರಶ್ನೆ ಮಾಡಿದೆ. ಇದರ ಅರ್ಥ ಇದು ರಾಜಕೀಯ ದುರುದ್ದೇಶ ಎಂಬುದು ಸ್ಪಷ್ಟ ಎಂದರು.

ಕುಗ್ಗಿಸಿದಷ್ಟು ನಾವು ಪುಟಿದೇಳುತ್ತೇವೆ : ಸಿಎಂ ಇಬ್ರಾಹಿಂ

ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ಮಾತನಾಡಿ ವಿನಾಶಕಾಲೇ ವಿಪರೀತ ಬುದ್ಧಿ ಅಂತಾರೆ. ಹಿಂದೂ ಹಿಂದೂ ಅಂತ ಹೇಳ್ತಾರೆ. ನಾಲ್ಕು ದಿನ‌ ವಿಚಾರಣೆ ಮಾಡಿದ್ದಾರೆ. ಒಂದು ದಿನ ಅವರ ಅಪ್ಪನಿಗೆ ಪೂಜೆ ಮಾಡಲು ಬಿಡಲಿಲ್ಲ. ಕುಗ್ಗಿಸಿದಷ್ಟು ನಾವು ಪುಟಿದೇಳುತ್ತೇವೆ. ಚೆಂಡನ್ನು ನೀವು ಎಷ್ಟೇ ಜೋರಾಗಿ ಎಸೆದರೂ, ಅಷ್ಟೇ ಜೋರಾಗಿ ವಾಪಸ್ ಬರುತ್ತೆ. ನಾವು ರಾಜಕೀಯವಾಗಿ ಮತ್ತಷ್ಟು ಶಕ್ತಿ ಶಾಲಿಗಳಾಗುತ್ತೇವೆ. ಅವರು ನಮ್ಮ ನಾಯಕರನ್ನು ರಾಜಕೀಯವಾಗಿ ಮುಗಿಸಬೇಕು ಅಂತ ಅಂದು ಕೊಂಡಿದ್ರೆ ಅದು ಅವರ ಕನಸು. ಅದು ಸಾಧ್ಯವಾಗದ ಮಾತು  ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: