ಮೈಸೂರು

ಇಂದು, ನಾಳೆ ನೀರು ಇರಲ್ಲ

ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಕಬಿನಿ ಮೂಲ ಸ್ಥಾವರದಲ್ಲಿನ ತಾಂತ್ರಿಕ ದೋಷದಿಂದಾಗಿ ಪಂಪಿನ ದುರಸ್ತಿ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಕಬಿನಿ ನದಿ ಮೂಲದಿಂದ ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಸರಬರಾಜು ಆಗುವುದಿಲ್ಲ. ಹೀಗಾಗಿ ಫೆ.21 ಮತ್ತು 22 ರಂದು ವಾರ್ಡ್ ನಂ.2,3,4,5,6,7,8,9,11,12,13,14,15,16,17,18,19,21,22,24 ಮತ್ತು ದಟ್ಟಗಳ್ಳಿ 3 ನೇ ಹಂತ ಮತ್ತು ಹೂಟಗಳ್ಳಿಯಲ್ಲಿ ನೀರು ವ್ಯತ್ಯಯವಾಗಲಿದೆ ಎಂದು ವಾಣಿವಿಲಾಸ ನೀರು ಸರಬರಾಜು ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

Leave a Reply

comments

Related Articles

error: