ಸುದ್ದಿ ಸಂಕ್ಷಿಪ್ತ

ಪಟಾಕಿ ಮಾರಾಟ ಮಾಡಲಿಚ್ಛಿಸುವವರು ಅರ್ಜಿ ಸಲ್ಲಿಸಲು ಸೂಚನೆ

ಮೈಸೂರು,ಸೆ.4:-  2019ನೇ ವರ್ಷದ ದೀಪಾವಳಿ ಹಬ್ಬವು 25/10/2019 ರಿಂದ 27/10/2019 ರವರೆಗೆ ನಡೆಯಲಿದ್ದು,  ಈ ಪ್ರಯುಕ್ತ ಮೈಸೂರು ನಗರದ ವಿವಿಧ ಬಡಾವಣೆಗಳಲ್ಲಿ ಪಟಾಕಿ ಮಾರಾಟ ಮಾಡಲಿಚ್ಛಿಸುವವರು,  ರಹದಾರಿಯನ್ನು ಪಡೆಯುವ ಸಂಬಂಧ ಭರ್ತಿ ಮಾಡಿದ ನಮೂನೆ ಫಾರಂ ಐಇ-5 ನ್ನು 25/09/2019 ರೊಳಗೆ ಪೊಲೀಸ್ ಆಯುಕ್ತರವರ ಕಛೇರಿಗೆ  ಸಲ್ಲಿಸಲು ಸೂಚಿಸಲಾಗಿದೆ.

ಕೊನೆಯ ದಿನಾಂಕದ ನಂತರ ಸ್ವೀಕೃತವಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು  ತಿಳಿಯಪಡಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: