ಮೈಸೂರು

ಮೈಸೂರು ಕೋರ್ಟ್ ಆವರಣದಲ್ಲಿ ಬಾಂಬ್ ಸ್ಫೋಟ ಪ್ರಕರಣದ ತನಿಖೆ ಎನ್ಐಎಗೆ

ಕಳೆದ ಆಗಸ್ಟ್ 1ರಂದು ಸಂಜೆ ಮೈಸೂರಿನ ಕೋರ್ಟ್ ಆವರಣದಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎನ್ಐಎ(ರಾಷ್ಟ್ರೀಯ ತನಿಖಾ ದಳ)ಗೆ ನೀಡಿದೆ.
ಆಂಧ್ರಪ್ರದೇಶದ ಚಿತ್ತೂರು, ಕೇರಳದ ಕೊಲ್ಲಂ ಮತ್ತು ಮೈಸೂರಿನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಾಮ್ಯತೆ ಇದೆ. ಇದೊಂದು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಿರುವ ಕೇಂದ್ರ ಗೃಹ ಇಲಾಖೆ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಕರ್ನಾಟಕಕ್ಕೆ ಸರಕಾರಕ್ಕೆ ಸೂಚಿಸಿತ್ತು.
ಚಿತ್ತೂರು ಸ್ಫೋಟದ ಹೊಣೆಹೊತ್ತುಕೊಂಡು ‘ಬೇಸ್ ಮೂಮೆಂಟ್’ ಕಳುಹಿಸಿದ ಪತ್ರದಲ್ಲಿ ಬಿನ್ ಲಾಡೆನ್ ಚಿತ್ರವಿತ್ತು. ದಕ್ಷಿಣ ಭಾರತದಲ್ಲಿ ಸಕ್ರಿಯವಾಗಿರುವ ಉಗ್ರ ಸಂಘಟನೆ ಅಲ್-ಉಮಾ ‘ಬೇಸ್ ಮೂಮೆಂಟ್’ ಎಂದು ಹೆಸರನ್ನು ಬದಲಾಯಿಸಿಕೊಂಡಿದೆ. ಇದು ಅಲ್-ಖೈದಾ ಸಂಘಟನೆಯ ಒಂದು ಭಾಗವಾಗಿದೆ ಎನ್ನಲಾಗಿದೆ.

Leave a Reply

comments

Related Articles

error: