ಪ್ರಮುಖ ಸುದ್ದಿಮೈಸೂರು

‘ಬಿಜ್ ಗ್ರೋಸರಿ’ ಯಿಂದ ದಿನ ಬಳಕೆ ಪದಾರ್ಥಗಳು ಕ್ಷಣ ಮಾತ್ರದಲ್ಲಿಯೇ ಮನೆ ಬಾಗಿಲಿಗೆ

ಮೈಸೂರು,ಸೆ.5 : ಮನೆಗೆ ದಿನನಿತ್ಯ ಬೇಕಾಗುವಂತ ದಿನಸಿ, ಹಣ್ಣು, ತರಕಾರಿ, ಮಾಂಸಾಹಾರ, ಸೀ ಪುಡ್ ಪಾದಾರ್ಥಗಳನ್ನು ಫೋನ್ ಮೂಲಕ ಬುಕ್ ಮಾಡಿದರಾಯ್ತು ಕ್ಷಣ ಮಾತ್ರದಲ್ಲಿ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಮೊಬೈಲ್ ಆಪ್ ‘ಬಜ್ ಗ್ರೋಸರಿ’ ಅನ್ನು ತಯಾರಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ವಿಜಯ್ ಸ್ವರೂಪ್ ತಿಳಿಸಿದರು.

ದಿನಸಿ ಮೂಲಕ ದೇಶದ ಜನರನ್ನು ಒಗ್ಗೂಡಿಸಿ ಹಣ ವಿದೇಶಿ ಕಂಪನಿ ಪಾಲಾಗದಂತೆ ತಡೆಯುವುದು, ಬಡ, ಮಧ್ಯಮ ವರ್ಗದ ಜನರಿಗೆ ಬಳಕೆಗೆ ಬೇಕಾಗುವಂತ ವಸ್ತುಗಳನ್ನು ಪ್ರತಿ ತಿಂಗಳು ಉಚಿತವಾಗಿ ಕೊಡಲು (ಆರ್ ಆರ್ ಆರ್  ಕಾರ್ಯಕ್ರಮ) ಹಾಗೂ ಉದ್ಯೋಗ ಸೃಷ್ಟಿ  ನಿಟ್ಟಿನಲ್ಲಿ ಆಪ್ ರೂಪಿಸಲಾಗಿದೆ, ಇಂದು ಆಕ್ಟಿವ್ ಆಗಲಿದ್ದು ಪ್ರತಿಯೊಬ್ಬರು ಡೌನ್ ಲೋಡ್ ಮಾಡಿಕೊಂಡು ಇತರರಿಗೆ ರಿಫರೆನ್ಸ್ ಮಾಡಿದರೆ ಪರ್ಸೆಂಟ್ ರಿಯಾಯಿತಿ ನೀಡಲಾಗುವುದು ನೂರು ಜನರಿಗೆ ರಿಫರೆನ್ಸ್ ಮಾಡಿದರೆ ಆ ತಿಂಗಳ ದಿನಸಿ ನೀಡಲಾಗುವುದು, ತಮ್ಮ ರೆಫರೆನ್ಸ್ ಮೇಲೆ 10 ಜನ ಆಪ್ ಡೌನ್ ಲೋಡ್ ಮಾಡಿದರೆ 100 ರೂ.ಗಳ ದಿನಸಿಯನ್ನು ದಿನಕ್ಕೆ ಉಚಿತವಾಗಿ  ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಾರುಕಟ್ಟೆ ಮುಖ್ಯಸ್ಥರಾದ ಭರತ್ ಕುಮಾರ್, ಶ್ರೀನಿವಾಸ, ಹರ್ಷ, ರಂಜಿತ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: