ಮೈಸೂರು

ಕೌನ್ಸಿಲ್ ಸಭೆಯಲ್ಲಿ ಪಾಲಿಕೆಯ ಆಯುಕ್ತರ ಬಗ್ಗೆ ಅಪಸ್ವರ : ಹಲವು ಸಮಸ್ಯೆಗಳನ್ನು ಸಭೆಯ ಮುಂದಿರಿಸಿದ ಸದಸ್ಯರು

ಮೈಸೂರು,ಸೆ.5:-  ಮೊದಲ ಕೌನ್ಸಿಲ್ ಸಭೆಯಲ್ಲಿ ಪಾಲಿಕೆ ಆಯುಕ್ತರ ಬಗ್ಗೆ ಅಪ ಸ್ವರವೆದ್ದಿದ್ದು, ಕಳೆದ ಬಾರಿ ಇದ್ದ ಆಯುಕ್ತರು ಚಾಲನೆ ನೀಡಿದ್ದ ಕಾಮಗಾರಿಗಳನ್ನು ನೀವು ತಡೆ ಹಿಡಿದಿದ್ದೀರಿ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇದ್ದರೇ ಅದರ ಬಗ್ಗೆ ಮಾಹಿತಿ ನೀಡಿ ಎಂದು ಪಾಲಿಕೆ ಸದಸ್ಯರು ಆಯುಕ್ತರಿಗೆ ಮನವಿ ಮಾಡಿದ ಘಟನೆ  ಇಂದು ಆಯುಕ್ತರು ಹಾಗೂ ಉಪ ಮಹಾ ಪೌರರ ನೇತೃತ್ವದಲ್ಲಿ ನಡೆಯುತ್ತಿರುವ ಕೌನ್ಸಿಲ್ ಸಭೆಯಲ್ಲಿ ನಡೆಯಿತು.

ಕೊನೆಗೂ ಪಾಲಿಕೆ ಸದಸ್ಯರ ಒತ್ತಡಕ್ಕೆ   ಆಯುಕ್ತ ಗುರುದತ್ ಹೆಗಡೆ ಮಣಿದರು.  25ನಿಮಿಷಗಳ ನಂತರ ಮತ್ತೆ ಸಭೆ ಪ್ರಾರಂಭವಾಯಿತು. ಸಭೆಯಲ್ಲಿ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಮಾತನಾಡಿ   ಮೈಸೂರು ಗುಂಡಿಗಳ ನಗರವಾಗಿದೆ. ದಸರಾ ಸಮೀಪಿಸಿರುವ ಹಿನ್ನೆಲೆಯಲ್ಲಿ ಗುಂಡಿ ಮುಚ್ಚುವ ಕೆಲಸದ ಪ್ರಗತಿ ಕುರಿತು ಚರ್ಚಿಸಬೇಕೆಂದು ಮನವಿ ಮಾಡಿದರು.

ಇದಕ್ಕೆ ದನಿಗೂಡಿಸಿದ ಪ್ರೇಮಾಶಂಕರೇಗೌಡ, ಈ ಹಿಂದಿನ ಆಯುಕ್ತರು ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಮುಂದುವರೆಸಲು ನಿರ್ಧರಿಸಬೇಕೆಂದು ಮನವಿ ಮಾಡಿದರು. ಈ ಮಧ್ಯೆ ಮಾತನಾಡಿದ ಪಾಲನೇತ್ರಾ ವಿರೋಧ ಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಿ ಎಂದು ಪಟ್ಟು ಹಿಡಿದರು.

ಈ ವೇಳೆ ಮಾತನಾಡಿದ ಮಾ.ವಿ.ರಾಮ್ ಪ್ರಸಾದ್ ಮೊದಲು ಗುಂಡಿ ಮುಚ್ಚುವ ಬಗ್ಗೆ ಉತ್ತರಿಸಿ ಹಾದಿ ಬೀದಿಯಲ್ಲಿ ಪಾಲಿಕೆಯ ಮಾನ ಮರ್ಯಾದೆ ಹೋಗುತ್ತಿದೆ. ಈ ಬಗ್ಗೆ ಉತ್ತರ ಸಿಗಬೇಕಿದೆ ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಪ್ರೇಮಾಶಂಕರೇಗೌಡ ಧನಿಗೂಡಿಸಿ ಈ ಬಗ್ಗೆ ಉತ್ತರಿಸುವಂತೆ ಒತ್ತಾಯಿಸಿದರು.

ವಿರೋಧ ಪಕ್ಷದ ನಾಯಕ ಮಂಜುನಾಥ್ ಮಾತನಾಡಿ, ಮಳೆಗೆ ಕೈಗೊಳ್ಳಬೇಕಾದ ಯಾವುದೇ ಕ್ರಮಗಳನ್ನು ನೀವು ಕೈಗೊಳ್ಳಲು ಆಗುತ್ತಿಲ್ಲ. ಉದ್ಯಾನವನಗಳ ಅವ್ಯವಸ್ಥೆ ಸರಿ ಪಡಿಸುವ ಕೆಲಸ ಆಗುತ್ತಿಲ್ಲ. ವಲಯ 1 ರ ಪರಿಸರ ಅಧಿಕಾರಿ ಒಂದು ಸಾವಿರ ಗಿಡಕ್ಕಾಗಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆಗಾಲ ಬಂದರೂ ಎಲ್ಲೂ ಉದ್ಯಾನವನ ಬೆಳೆಸುವ ಕೆಲಸ ಅರಣ್ಯ ಇಲಾಖೆ ಮಾಡುತ್ತಿಲ್ಲವೆಂದು ದೂರಿದರು.

ಅರಣ್ಯ ವಲಯ ಸಹಾಯಾಧಿಕಾರಿ ಮಂಜು ವರ್ಷ ಹಾಗೂ ಆರು ತಿಂಗಳ ಮುಂಚೆಯೇ ಮನವಿ ಸಲ್ಲಿಸಬೇಕಿದೆ. ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ಇಂದಿಗೂ ದುಸ್ಥಿತಿಯಲ್ಲಿದೆ. ಟೌನ್ ಹಾಲ್ ಪಾರ್ಕಿಂಗ್ ವ್ಯವಸ್ಥೆ , ಸ್ಮಶಾನಗಳಿಗೆ ಮೂಲಭೂತ ಸೌಕರ್ಯ ಇಲ್ಲವಾಗಿದೆ. ಕಂಸಾಳೆ ಮಹದೇವಯ್ಯ ಸರ್ಕಲ್ ಯುಜಿಡಿ ಸಮಸ್ಯೆ ಹಾಗೇ ಉಳಿದಿದೆ. ಹುಕ್ಕಾ ಸೆಂಟರ್ ಮೇಲೆ ದಾಳಿ ನಡೆಯುತ್ತಿದೆ. ಆರೋಗ್ಯ ಇಲಾಖೆ ಸುಮ್ಮನೆ ಇದೆಯೇ. ಯುಜಿ ಕೇಬಲ್ ಅಳವಡಿಕೆ ಸಂಬಂಧ ಡ್ರಾಯಿಂಗ್ ಕೊಡಿ ಎಂದರೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ವಾಟರ್ ಲೈನ್ ಒಡೆದು ಹೋಗಿ ವಾರ ನೀರು ಬಂದಿಲ್ಲ. ಇದಕ್ಕೆ ಹೊಣೆ ಯಾರು ಎಂದರು.

ಯೋಗಲಕ್ಷ್ಮಿ ಬಾಂಡ್ ಅನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಹುಟ್ಟಿದವರಿಗೆ ಮಾತ್ರವೇ ಸೀಮಿತಿಗೊಳಿಸಿ ಅದು ಮೂಲೆಗುಂಪಾಗಿದೆ. 2018-19 ರವರಿಗೆ 15 ಕೋಟಿ ಪೀಸ್ ವರ್ಕ್ ಯಾವ ಆಧಾರದ ಮೇಲೆ ಮಾಡಿದ್ದೀರಿ. ಗುತ್ತಿಗೆದಾರರ ಗೋಳು ಕೇಳದಾಗಿದೆ. ಬೇರೊಬ್ಬ ಆಯುಕ್ತರು ಮಾಡಿದ ಕಾಮಗಾರಿಗೆ ಅನುಮೋದನೆ ನೀಡದೇ ಪರಿಶೀಲಿಸಬೇಕು ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಟೆಂಡರ್ ಕರೆಯುವ ಮೊದಲೇ ಪರಿಶೀಲಿಸಬೇಕೆಂದರೆ ಹೇಗೆ? ನಮ್ಮನ್ನೇ ಕಳ್ಳರ ಸ್ಥಾನದಲ್ಲಿ ನಿಲ್ಲಿಸುತ್ತೀರಾ? ಈ ಬಗ್ಗೆ ಸಚಿವರು ಸೂಚಿಸಿದರೂ ಯಾಕೆ ಹೀಗೆ ಮಾಡುತ್ತಿರಾ ಸರ್ಕಾರದ ಪ್ರತಿನಿಧಿಗಳಿಗೆ ಗೌರವ ಇಲ್ಲವೆ ಎಂದು ಹೇಳಿದರು. ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಚಾರದಲ್ಲಿ ಸೀನಿಯರ್ ಗಳಿಂದ ಮಾಡುವುದಾಗಿ ಹೇಳುತ್ತೀರಾ? 2018-19 ನೇ ಸಾಲಿನವರಿಗೆ ಹಣ ಕೊಟ್ಟಿದ್ದೀರಾ 2017-18 ನೇ ಸಾಲಿನವರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: