ಮೈಸೂರು

ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆಯಿಂದ ಕಾವೇರಿಗೆ ಬಾಗಿನ ಸಮರ್ಪಣೆ ನಾಳೆ

ಮೈಸೂರು,ಸೆ.5 : ಭಾರತೀಯ ಸಾಂಸ್ಕೃತಿಕ ವಿಕಾಸ ವೇದಿಕೆಯ 19ನೇ ವರ್ಷದ 119ನೇ ಸಂಭ್ರಮಾಚರಣೆ ಅಂಗವಾಗಿ ಕಾವೇರಿಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಸೆ.6ರ ಬೆಳಗ್ಗೆ 11 ಗಂಟೆಗೆ ಕೆ.ಆರ್.ಎಸ್ ನ ಬಲಭಾಗದ ವರುಣಾನಾಲೆಯ ಪ್ರಾರಂಭ ಹಂತದಲ್ಲಿ ಹಮ್ಮಿಕೊಳ್ಳಲಾಗಿದೆ.

ಮಾಜಿ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಉಪಸ್ಥಿತರಿರುವರು, ಸಮಾಜ ಚಿಂತಕ ಕೆ.ಎಸ್.ರಘುರಾಮಯ್ಯ ವಾಜಪೇಯಿ ಅಧ್ಯಕ್ಷತೆ, ವಾಣಿಜ್ಯೋದ್ಯಮಿಗಳಾದ ಲಯನ್ ವೆಂಕಟೇಶ್, ಸಿ.ಜಗದೀಶ್, ಕಲಾವಿದೆ ಮೈತ್ರಿಯಾ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಆರ್.ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್.ಎಂ.ಸುರೇಶ್ ಹಾಗೂ ಇತರರು ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: