ದೇಶಪ್ರಮುಖ ಸುದ್ದಿ

ಪ್ರಚೋದನಕಾರಿ ಹೇಳಿಕೆ : ಕಮಲ್ ಹಾಸನ್ ವಿರುದ್ಧ ದೂರು ದಾಖಲು

ಚೆನ್ನೈ: ನಟ ಕಮಲ್ ಹಾಸನ್ ತಮಿಳುನಾಡಿನ ರಾಜಕೀಯ ಪರಿಸ್ಥಿತಿಯ ಕುರಿತು ಪ್ರಚೋದನಕಾರಿಯಾಗಿ ಹೇಳಿಕೆ ನೀಡುತ್ತಿದ್ದು, ಶಾಸಕರ ಬಗ್ಗೆ ನಕಾರಾತ್ಮಕ ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿದ್ದಾರೆ.

“ವಿದ್ಯಾರ್ಥಿಗಳು ಯುವಕರನ್ನು ಪ್ರಚೋದಿಸುವ ರೀತಿಯಲ್ಲಿ ಕಮಲ್ ಹಾಸನ್ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಇಂಡಿಯನ್ ನ್ಯಾಷನಲ್ ಲೀಗ್ ಪಾರ್ಟಿಯ ಚೆನ್ನೈ ನಗರ ಘಟಕವು ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ.

ಇಷ್ಟು ಮಾತ್ರವಲ್ಲದೆ “ನಾನು ರಾಜಕೀಯಕ್ಕೆ ಬಂದರೆ ಗನ್‍ಗಳೊಂದಿಗೆ ಬರುತ್ತೇನೆ” ಎಂದಿದ್ದ ಕಮಲ್, ನೂತನ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಆಯ್ಕೆ, ವಿಶ್ವಾಸಮತ ಸಾಬೀತು ಮಾಡಿದ ರೀತಿಯ ಕುರಿತು ಕೂಡಾ ಆವೇಶವಾಗಿ ಮಾತನಾಡಿದ್ದರು.

ಟ್ವಿಟ್ಟರ್‌’ನಲ್ಲಿ ‘People of Tamizhnadu, Welcome your respective MLAs with the respect they desrve back home’ ಎಂದು ಟ್ವೀಟ್ ಮಾಡಿದ್ದ ಕಮಲ್, ತಮಿಳುನಾಡಿನ ಶಾಸಕರಿಗೆ ವಿರುದ್ಧವಾಗಿ ಅವರ ವಿರುದ್ಧ ಜನರನ್ನು ಎತ್ತಿಕಟ್ಟಿ ದೊಂಬಿಗೆ ಪ್ರೇರೇಪಿಸುವಂತಿದೆ. ಹೀಗಾಗಿ ಕಮಲ್ ಅವರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.

ಸುಬ್ರಮಣಿಯನ್ ಸ್ವಾಮಿ ಕಿಡಿ !

ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಕಮಲ್ ಹಾಸನ್ ವಿರುದ್ಧ ಕಿಡಿಕಾರಿದ್ದಾರೆ. “ಕಮಲ್ ಒಬ್ಬ ಮೂಳೆಗಳಿಲ್ಲದ ಅದ್ಭುತ ಮತ್ತು ಸ್ವಪ್ರತಿಷ್ಠೆಯ ಮೂರ್ಖ” ಎಂದು ಟ್ವೀಟರ್‌ನಲ್ಲಿ ಜರಿದಿದ್ದಾರೆ. ಕಮಲ್ ಹಾಸನ್ ಬಿಜೆಪಿಗೆ ಬಂದರೆ ನೀವು ಸೇರಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಸುಬ್ರಮಣಿಯನ್ ಸ್ವಾಮಿ ಮರುಟ್ವೀಟ್‌ ಮಾಡಿದ್ದಾರೆ.

Leave a Reply

comments

Related Articles

error: