ಮೈಸೂರು

ಶಾಂತಿ, ಸಾಮರಸ್ಯ, ಸೌಹಾರ್ದತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತದಲ್ಲಿದೆ : ವಿದ್ವಾಂಸ ಪ್ರೊ.ಸಿ.ಎ.ಶ್ರೀಧರ್

‘ವಿಶ್ವ ಸಂಗೀತ ಹಾಗೂ ಜನಪದ ಸಂಗೀತ ದಿನಾಚರಣೆ’ ವಿಶೇಷ ಉಪನ್ಯಾಸ

ಮೈಸೂರು,ಸೆ.6:- ಶಾಂತಿ, ಸಾಮರಸ್ಯ, ಸೌಹಾರ್ದತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತದಲ್ಲಿದೆ ಎಂದು ಬಹುಶೃತ ವಿದ್ವಾಂಸ ಪ್ರೊ.ಸಿ.ಎ.ಶ್ರೀಧರ್ ತಿಳಿಸಿದರು.

ಅವರಿಂದು ಲಕ್ಷ್ಮಿಪುರಂನಲ್ಲಿರುವ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದಲ್ಲಿ ‘ವಿಶ್ವ ಸಂಗೀತ ಹಾಗೂ ಜನಪದ ಸಂಗೀತ ದಿನಾಚರಣೆ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಸಂಗೀತ ಎಂತಹ ವ್ಯಕ್ತಿಯನ್ನಾದರೂ ಯಾವ ಸ್ತರಕ್ಕೆ ಬೇಕಾದರೂ ಕೊಂಡೊಯ್ಯಲಿದೆ. ವ್ಯಕ್ತಿಗತ ಆರೋಗ್ಯ ಉತ್ತಮವಾಗಿರತ್ತೆ. ಸಂಗೀತ ಶಾಂತಿಯ ಸಂದೇಶ ನೀಡತ್ತೆ. ಮೇಲ್ಮಟ್ಟದ ಸಂದೇಶವನ್ನು ಜಾಗತಿಕವಾಗಿ ನೀಡಿದೆ. ವಿಶ್ವದೆಲ್ಲೆಡೆ ಶಾಂತಿ ನೆಲೆಸಬೇಕು. ಹಿಂಸೆ , ಸಾಮಾಜಿಕ ಪಿಡುಗುಗಳು ತೊಲಗಬೇಕು. ಸಾಮಾಜಿಕವಾಗಿ ಪ್ರೀತಿ, ಸೌಹಾರ್ದತೆ, ವಿಶ್ವಾಸ ಮೂಡಿಬರಬೇಕು. ಶಾಂತಿ ಪ್ರಧಾನವಾಗಿರಬೇಕು ಎಂಬುದನ್ನು ತಿಳಿಸಲಿದೆ ಎಂದರು. ಭೂಮಿಯ ಮೇಲಿರುವ ಯಾವುದನ್ನು ಅಭಿವ್ಯಕ್ತಿ ಪಡಿಸಲು ಸಾಧ್ಯವಿಲ್ಲವೋ ಅದನ್ನು ಸಂಗೀತ ಅಭಿವ್ಯಕ್ತಿ ಪಡಿಸತ್ತೆ. ಸಂಗೀತ ಒಂದು ಭಾಷೆ. ಸಂಗೀತದ ಭಾಷೆ ಅವ್ಯಜ್ತ ಸ್ವರೂಪದ ಅಮೂರ್ತ ಭಾವನೆಗಳನ್ನು ಮೂರ್ತೀಕರಿಸಲಿದೆ. ಶೃತಿ, ಲಯ ಸಂಗೀತದ ಆಧಾರ ಸ್ಥಂಭ. ವಿಶ್ವದ ಎಲ್ಲ ಸಂಗೀತಗಳಲ್ಲಿ ಲಯವಿದೆ. ಸಮಸ್ತ ಆಕಾಶಕಾಯಗಳು ಕೂಡ ಲಯದಲ್ಲಿಯೇ ತಿರುಗುತ್ತವೆ. ಸೃಷ್ಟಿಯಲ್ಲಿ ಪ್ರತಿಯೊಂದು ಪ್ರಕ್ರಿಯೆ ಕೂಡ ಲಯತ್ವದೆಡೆಗೆ ಹೋಗಲಿದೆ. ಸಂಗೀತ ನಮ್ಮಲ್ಲಿಯೇ ಇದೆ. ಸಂಗೀತವನ್ನು ಅನುಭವಿಸಬೇಕು. ಖುಷಿಯ ಸ್ತರವನ್ನು ದಾಟಿ ಆನಂದ ಅನುಭವಿಸುವೆಡೆಗೆ ಕರೆದೊಯ್ಯುತ್ತದೆ ಎಂದು ತಿಳಿಸಿದರು. ವಿಶ್ವ ಸಂಗೀತ ವಿರಾಟ್ ಶಬ್ದ ಇದಕ್ಕೆ ಆಯಾಮವೇ ಇಲ್ಲ. ಅನಂತದಿಂದ ಅನಂತದೆಡೆಗೆ ಸಾಗತಕ್ಕ ತರಂಗ ಸಂಗೀತ. ಇದಕ್ಕೆ ಯಾವ ದೇಶ, ಭಾಷೆ, ಜಾತಿಯ ಭೇದವಿಲ್ಲ. ಗೀತ, ನಾದ ನೃತ್ಯ ಸೇರಿ ಸಂಗೀತವಾಗಿದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ವಿವಿಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಉತ್ತರಕನ್ನಡ ಜಿಲ್ಲೆ ಹೊನ್ನಾವರ ಎಸ್ ಡಿಎಂ ಕಾಲೇಜಿನ ಸಂಗೀತ ವಿಭಾಗದ ಸಹ ಪ್ರಾಧ್ಯಾಪಕ ಡಾ.ಅಶೋಕ ಹುಗ್ಗಣ್ಣವರ್ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: