ಮೈಸೂರು

ಜಯದೇವ ಅವರಿಗೆ ಅಂತಿಮ ನಮನ ಸಲ್ಲಿಸಿದ ಗಣ್ಯರು

ಸೋಮವಾರ ಬೆಳಿಗ್ಗೆ ನಿಧನರಾದ ಆರ್.ಎಸ್.ಎಸ್ ಪ್ರಚಾರಕ ಮೈ,ಚ.ಜಯದೇವ್  ಅವರ ಅಂತಿಮ ದರ್ಶನಕ್ಕೆ  ರಾಜ್ಯಾಧ್ಯಕ್ಷ ಬಿಎಸ್.ಯಡ್ಯೂರಪ್ಪ ಆಗಮಿಸಿ, ಅಂತಿಮ ದರ್ಶನ ಪಡೆದರಲ್ಲದೇ ಕುಟುಂಬಿಕರಿಗೆ ಸಾಂತ್ವನ ಹೇಳಿದರು.
ಸೋಮವಾರ ಬೆಳಿಗ್ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೈ.ಚ ಜಯದೇವ್.ಇಹಲೋಕ ತ್ಯಜಿಸಿದ್ದರು.
ಮೈಸೂರಿನ ವಿದ್ಯಾರಣ್ಯಪುರಂನಲ್ಲಿರುವ ವೀರಶೈವ ಸಮುದಾಯದ ರುದ್ರ ಭೂಮಿಯಲ್ಲಿ ವೀರಶೈವ ಪರಂಪರೆ ಅನುಸಾರವಾಗಿ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.  ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ, ರಾಜಕೀಯ ಮುಖಂಡರುಗಳಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಎಂ.ಕೆ. ಸೋಮಶೇಖರ್, ಚಿಕ್ಕಣ್ಣ, ಸಿ.ಎಚ್. ವಿಜಯಶಂಕರ್, ಸಿ. ರಮೇಶ್, ತೋಂಟದಾರ್ಯ, ಗೋ. ಮಧುಸೂದನ್ ಮತ್ತಿತರರು ಅಂತಿಮ ದರ್ಶನ ಪಡೆದರು.

Leave a Reply

comments

Related Articles

error: