ಸುದ್ದಿ ಸಂಕ್ಷಿಪ್ತ

ನಾಳೆ ಸುಗಮ ಸಂಗೀತ- ಪೌರಾಣಿಕ ರಂಗ ದೃಶ‍್ಯಾವಳಿ

ಮೈಸೂರು,ಸೆ.6 : ಭುವನೇಶ್ವರಿ ಕಲಾ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಪೌರಾಣಿಕ ರಂಗ ದೃಶ್ಯಾವಳಿಗಳು ಹಾಗೂ ನಾಗಶ್ರೀ ಕಲಾ ಸಂಗಮದಿಂದ  ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಸೆ.7ರ ಸಂಜೆ 4ಕ್ಕೆ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅರ್ಪಿತ ಸಿಂಹ ಉದ್ಘಾಟಿಸುವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಚನ್ನಪ್ಪ, ಹಿರಿಯ ಕಲಾವಿದ ಕಾ.ಪು.ಸಿದ್ದವೀರಪ್ಪ, ಸಹಕಾರಿ ಧುರೀಣ ಹೆಚ್.ವಿ.ರಾಜೀವ್, ಸಮಾಜ ಸೇವಕ ರಘುರಾಂ ವಾಜಪೇಯಿ, ಮಹಾನಗರ ಪಾಲಿಕೆ ಸದಸ್ಯ ಮಾ.ವಿ.ರಾಮ್ ಪ್ರಸಾದ್ ಹಾಗೂ ಇತರರು ಹಾಜರರಿರಲಿದ್ದಾರೆ ಎಂದು ಕಾರ್ಯಕ್ರಮ ವ್ಯವಸ್ಥಾಪಕ ಸುಚೀಂದ್ರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: