ಸುದ್ದಿ ಸಂಕ್ಷಿಪ್ತ

ಸೆ.8ರಂದು ರಾಜರ್ಷಿ ನಾಲ್ವಡಿ ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಸೆ.6 : ಭಾರತ ದರ್ಶಿತ್ವ ಟ್ರಸ್ಟ್, ಕರ್ನಾಟಕ ರಾಜ್ಯ ಸರ್ವಜನ ಮಹಿಳಾ ಹಿತರಕ್ಷಣಾ ವೇದಿಕೆ, ಅರೋರಾ ಎಜುಕೇಷನಲ್ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ‘ರಾಜರ್ಷಿ ನಾಲ್ವಡಿ ಪ್ರಶಸ್ತಿ ಪ್ರದಾನ ಸಮಾರಂಭ’ ಅನ್ನು ಸೆ.8ರ ಬೆಳಗ್ಗೆ 10.30ಕ್ಕೆ ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.

ನಿವೃತ್ತ ಪ್ರಾಧ್ಯಾಪಕ ಪ್ರೊ.ಪ್ರಧಾನ ಗುರುದತ್ತ ಉದ್ಘಾಟಿಸುವರು, ಟ್ರಸ್ಟ್ ಅಧ್ಯಕ್ಷೆ ಡಾ.ಎಂ.ಕನ್ನಿಕಾ ಅಧ್ಯಕ್ಷತೆ ವಹಿಸುವರು, ಕ.ರಾ.ಸ.ಮ.ಹಿ ವೇದಿಕೆ ರಾಜ್ಯಾಧ್ಯಕ್ಷೆ ಯಶೋದ ನಾರಾಯಣ್, ಅರೋರಾ ಎಜುಕೇಷನ್ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಮಿತ ಸುಬ್ಬಯ್ಯ ಹಾಜರಿರುವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ನಿವೃತ್ತ ಅಧಿಕಾರಿ ಎಂ.ರಾಮಯ್ಯ ಹಾಗೂ ಪತ್ರಕರ್ತ ರವೀಂದ್ರ ಜೋಶಿಯವರನ್ನು ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. (ಕೆ.ಎಂ.ಆರ್)

Leave a Reply

comments

Related Articles

error: