ಮೈಸೂರು

ನಾಳೆಯಿಂದ ಅರಮನೆ ಆವರಣದಲ್ಲಿ ಸಾರ್ವಜನಿಕರ ಪ್ರವೇಶ ನಿರ್ಬಂಧ

ಸೆ.25 ರಂದು ಮೈಸೂರು ಅರಮನೆಯ ಚಿನ್ನದ ಸಿಂಹಾಸನವನ್ನು ಅರಮನೆಯ ಭದ್ರತಾ ಕೊಠಡಿಯಿಂದ ಹೊರತರಲು ಮತ್ತು ಮುಂಬರುತ್ತಿರುವ ದಸರಾ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಾರ್ವಜನಿಕರ ಪ್ರವೇಶಕ್ಕೆ ತಡೆಯೊಡ್ಡಿದೆ.
ಚಿನ್ನದ ಸಿಂಹಾಸನವು ಜಿಲ್ಲಾಡಳಿತದ ಭದ್ರತೆಯಲ್ಲಿದ್ದು, ಮೈಸೂರು ಜಿಲ್ಲಾಧಿಕಾರಿ ಡಿ.ರಂದೀಪ್ ಅವರ ಉಪಸ್ಥಿತಿಯಲ್ಲಿ ಹೊರತರಲಾಗುತ್ತದೆ. ಸೆ.25 ರ ಮುಂಜಾನೆ 6.15 ರ ಮಂಗಳಕರ ಮುಹೂರ್ತದಲ್ಲಿ ಪುರೋಹಿತರ ವಿಶೇಷ ಧಾರ್ಮಿಕ ಆಚರಣೆಗಳ ಮೂಲಕ ಸಿಂಹಾಸನವನ್ನು ಅರಮನೆಯ ‘ಕನ್ನಡಿ ತೊಟ್ಟಿ’ ಬಳಿ ಇರಿಸಲಾಗುತ್ತದೆ.
ಸಿಂಹಾಸನವನ್ನು ಒಳಗೊಂಡಂತೆ ಮುಖ್ಯ ಆಸನ, ಛತ್ರಿ, ಆಸನಕ್ಕೆ ದಾರಿ ತೋರುವ ಮೆಟ್ಟಿಲುಗಳ ಸಾಲು ಜೋಡಣೆಯು ಬೆ.8.10 ರಿಂದ 9.40 ರ ವರೆಗೆ ಜಿಲ್ಲಾಧಿಕಾರಿ, ಅರಮನೆ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಪ್ರಮೋದಾದೇವಿ ಒಡೆಯರ್ ಮತ್ತು ಯದುವೀರ್ ಕೃಷ್ಣದತ್ತ ಒಡೆಯರ್ ಅವರ ಉಪಸ್ಥಿತಿಯಲ್ಲಿ ಜರುಗುತ್ತದೆ. ನಂತರ ಸಿಂಹಾಸನದ ಮುಖವಾಡಕ್ಕೆ ಪರದೆ ಎಳೆಯಲಾಗುತ್ತದೆ.
ನವರಾತ್ರಿ ಹಬ್ಬದ ಸಮಯದಲ್ಲಿ ಯದುವೀರ್ ಕೃಷ್ಣದತ್ತ ಒಡೆಯರ್ ಈ ಚಿನ್ನದ ಸಿಂಹಾಸನದಲ್ಲಿ ಕುಳಿತು ‘ಖಾಸಾ ದರ್ಬಾರ್’ ನಡೆಸಲಿದ್ದಾರೆ.
ಚಿನ್ನದ ಸಿಂಹಾಸನ ಜೋಡಣೆ ಕಾರ್ಯ ಮತ್ತು ಖಾಸಾ ದರ್ಬಾರ್ ಇರುವ ಕಾರಣ ಅರಮನೆ ಮಂಡಳಿಯು ಸೆ.25 ರ ಮ. 1.30 ರ ತನಕ ಸಾರ್ವಜನಿಕರಿಗೆ ಅರಮನೆ ಪ್ರವೇಶವನ್ನು ನಿರ್ಬಂಧಿಸಿದೆ.

Leave a Reply

comments

Tags

Related Articles

error: