ಮೈಸೂರು

ವೃತ್ತಿ ರಹದಾರಿ ಮೇಳಕ್ಕೆ ಚಾಲನೆ

ಮೈಸೂರಿನ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲಿಕರ ಸಂಘದಲ್ಲಿ ಹೋಟೆಲ್ ಉದ್ಯಮದ ವೃತ್ತಿ ಬಾಂಧವರಿಗೆ ವೃತ್ತಿ ರಹದಾರಿ  ನವೀಕರಣ ಮೇಳವನ್ನು ಮೈಸೂರು ಮಹಾನಗರಪಾಲಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು.

ವೃತ್ತಿ ರಹದಾರಿ ನವೀಕರಣ ಮೇಳಕ್ಕೆ ಪಾಲಿಕೆಯ ಆಯುಕ್ತ ಜೆ.ಜಗದೀಶ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈ ಮೇಳವನ್ನು ಹೋಟೆಲ್ ಉದ್ಯಮಗಳ ಲಾಭಕ್ಕಾಗಿ, ಮಾಲಿಕರ ಅನುಕೂಲಕ್ಕಾಗಿ ಒಂದೇ ಸೂರಿನಡಿ  ಪರವಾನಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದರು. 9ವಲಯಗಳ ಅಧಿಕಾರಿಗಳೂ ನವೀಕರಣಗೊಳಿಸಿಕೊಳ್ಳಬೇಕು. ಭವಿಷ್ಯದಲ್ಲಿ ಹಲವು ಸಂಘ ಸಂಸ್ಥೆಗಳು ಈ ರೀತಿ ಮೇಳವನ್ನು ನಡೆಸಲು ಮುಂದೆ ಬರಬೇಕು ಎಂದು ತಿಳಿಸಿದರು.

ಎಫ್.ಕೆ.ಸಿ.ಸಿ.ಐ ಉಪಾಧ್ಯಕ್ಷ ಸುಧಾಕರ ಶೆಟ್ಟಿ ಮಾತನಾಡಿ ಈ ರೀತಿ ಮೇಳವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಹೋಟೆಲ್, ಉಪಹಾರಗೃಹಗಳು, ಸಸ್ಯಾಹಾರಿ, ಮಾಂಸಾಹಾರಿ ಹೋಟೆಲ್ ಗಳು, ಬೇಕರಿ ಸ್ವೀಟ್ಸ್ ಅಂಗಡಿಗಳು ಇನ್ನಿತರ ಸಂಘದ ಸದಸ್ಯರು ವೃತ್ತಿ ರಹದಾರಿ ನವೀಕರಣದಲ್ಲಿ ಪಾಲ್ಗೊಂಡು ಪರವಾನಗಿಯನ್ನು ನವೀಕರಣಗೊಳಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಹೋಟೆಲ್ ಮಾಲಿಕರ ಸಂಘದ ಅಧ್ಯಕ್ಷ  ಸಿ.ನಾರಾಯಣ ಗೌಡ, ಹೋಟೆಲ್ ಮಾಲಿಕರ ಸಂಘದ ಧರ್ಮದತ್ತಿ ಅಧ್ಯಕ್ಷ ರವಿಶಾಸ್ತ್ರಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: