ಮೈಸೂರು

‘ಗೋಲ್ಡನ್ ಚಾರಿಯಟ್’ ಅಕ್ಟೋಬರ್ 1 ರಿಂದ ದಸರಾ ವಿಶೇಷ ಪ್ಯಾಕೇಜ್ ಆರಂಭ

ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರಸಕ್ತ ಸಾಲಿನ ದಸರಾ ಸಂದರ್ಭದಲ್ಲಿ ‘ಗೋಲ್ಡನ್ ಚಾರಿಯಟ್’ ರೈಲಿನ ವಿಶೇಷ ಪ್ಯಾಕೇಜ್ ಆರಂಭಿಸಲು ಚಿಂತನೆ ನಡೆಸಿದೆ.

ಗೋಲ್ಡನ್ ಚಾರಿಯಟ್ ರೈಲಿನ ಪ್ರಯಾಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಿಗಮವು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಟಿಕೆಟ್ ದರವನ್ನು ಶ್ರೀಸಾಮಾನ್ಯರ ಕೈಗೆಟುಕುವಂತೆ ಮಾಡುವ ಉದ್ದೇಶವನ್ನು ಹೊಂದೆ. ದರ ನಿಗದಿ ಹಾಗೂ ಮಾರಾಟದ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ವಿಶೇಷ ಪ್ಯಾಕೇಜಿನ ಟಿಕೆಟ್‍ಗಳು ದೇಶದ ವಿವಿಧ ಪ್ರವಾಸೋದ್ಯಮ ವೆಬ್ ಸೈಟ್ ಅಲ್ಲೂ ಮುಂಗಡವಾಗಿ ಕಾಯ್ದಿರಸಬಹುದಾಗಿದೆ.

ಬೆಂಗಳೂರಿನಿಂದ ಮೈಸೂರಿಗೆ ಆರಂಭವಾಗುವ ಪ್ರಯಾಣವು ಒಂದು ದಿನ – ಎರಡು ರಾತ್ರಿಯನ್ನು ಒಳಗೊಂಡಿದ್ದು ಬೆಳಗಿನ ಉಪಹಾರ ವ್ಯವಸ್ಥೆ ಇರುವುದು. ಈ ರೈಲಿನಲ್ಲಿ ಪ್ರಯಾಣ ಮಾಡುವ ಪ್ರವಾಸಿಗರಿಗೆ ಗೋಲ್ಡ್ ಪಾಸ್ ವಿತರಣೆಯಾಗಲಿದ್ದು ದಸರಾ ಮುಖ್ಯ ಆಕರ್ಷಣೆ ಜಂಬೂ ಸವಾರಿ ಸೇರಿಂದತೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅರಮನೆ ಆವರಣದಲ್ಲಿ ವೀಕ್ಷಿಸಲು ಅನುಕೂಲವಾಗಲಿದೆ.

ಈ ವಿಶೇಷ ರೈಲು ವಿಕಲಚೇತನರ ಬರ್ತ್ ಸೇರಿದಂತೆ ಒಟ್ಟು 86 ಬರ್ತ್ ಹೊಂದಿದ್ದು ಪ್ರಚಾರದ ಹಿನ್ನಲೆಯಲ್ಲಿ ಆಗಸ್ಟ್ ತಿಂಗಳ ಕೊನೆಯಲ್ಲಿಯೇ ರೈಲನ್ನು ಆರಂಭಿಸಲಾಗಲಿದ್ದು ಪ್ರತಿ ಟಿಕೆಟ್ ದರ 30 ಸಾವಿರವಾಗಿದೆ.

ಪಂಚತಾರಾ ಹೊಟೇಲಿನಂತೆ ಊಟದ ವ್ಯವಸ್ಥೆ ಹಾಗೂ ‘ಸ್ಪಾ’ ಒಳಗೊಂಡಿದ್ದು ಪ್ರವಾಸೋದ್ಯಮ ಇಲಾಖೆಯು ಈ ವಿಶೇಷ ರೈಲನ್ನು ಪ್ರಾಯೋಗಿಕವಾಗಿ ವಾರಾಂತ್ಯದಲ್ಲಿ ಐತಿಹಾಸಿಕ ತಾಣಗಳಾದ ಮೈಸೂರು-ಹಂಪಿ ಮತ್ತು ಹಂಪಿ-ಬಾದಾಮಿ-ಪಟ್ಟದಕಲ್ಲುಗೆ ಓಡಿಸುತ್ತಿದೆ.

Leave a Reply

comments

Related Articles

error: