ದೇಶಪ್ರಮುಖ ಸುದ್ದಿವಿದೇಶ

ಭಯೋತ್ಪಾದಕ ನಾಯಕ ಮಸೂದ್ ಅಜರ್ ಪ್ರಸ್ತುತ ಪಾಕಿಸ್ತಾನ ಜೈಲಿನಲ್ಲಿಲ್ಲ : ಮೂಲಗಳಿಂದ ಮಾಹಿತಿ

ದೇಶ(ನವದೆಹಲಿ)ಸೆ.9:-  ಭಯೋತ್ಪಾದಕ ನಾಯಕ ಮಸೂದ್ ಅಜರ್ ಪ್ರಸ್ತುತ ಪಾಕಿಸ್ತಾನ ಜೈಲಿನಲ್ಲಿಲ್ಲ. ಪಾಕಿಸ್ತಾನದ ಅಧಿಕಾರಿಗಳು ಆತನನ್ನು ರಹಸ್ಯವಾಗಿ ಜೈಲಿನಿಂದ ಬಿಡುಗಡೆ ಮಾಡಿದ್ದಾರೆ.  ಪ್ರಸ್ತುತ ಬಹವಾಲ್ಪುರ್ ಜಿಲ್ಲೆಯ ಜೈಶ್-ಎ-ಮೊಹಮ್ಮದ್ ಅವರ ಪ್ರಧಾನ ಕಚೇರಿಯಲ್ಲಿದ್ದಾನೆ ಎಂದು ಮೂಲಗಳು ತಿಳಿಸುತ್ತಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಮಸೂದ್ ಅಜರ್  ಕೊನೆಯ ಸ್ಥಳ ಬಹವಾಲ್ಪುರದಲ್ಲಿ ನೆಲೆಗೊಂಡಿರುವ ಈ ಭಯೋತ್ಪಾದಕ ಸಂಘಟನೆಯ ಪ್ರಧಾನ ಕಛೇರಿಯಾದ ಮಾರ್ಕಾಜ್ ಸುಭಾನಲ್ಲಾ ಎಂದು ಹೇಳಲಾಗುತ್ತಿದೆ.

ಜೈಶ್ ಮುಖ್ಯಸ್ಥನ ಆರೋಗ್ಯ ಸುಧಾರಿಸಿದೆ, ಆದರೆ ಆತ ಹೊರಗೆ ಬರಲು ಇಚ್ಛಿಸುತ್ತಿಲ್ಲ.  ವಿಶ್ವದ ಮುಂದೆ ಪಾಕ್  ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಪಾಕಿಸ್ತಾನವು ಆಶ್ರಯ, ತರಬೇತಿ, ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಳುಹಿಸುತ್ತಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಇದರ ಹೊರತಾಗಿಯೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಇದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ದಾಳಿಯ ಜವಾಬ್ದಾರಿಯನ್ನು ಮಸೂದ್ ಅಜರ್ ಭಯೋತ್ಪಾದಕ ಸಂಘಟನೆ ವಹಿಸಿಕೊಂಡಿದೆ. ಈ ದಾಳಿಯಲ್ಲಿ 40 ಕ್ಕೂ ಹೆಚ್ಚು ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ. ಮಸೂದ್ ಅಜರ್ ನನ್ನು  ಜಾಗತಿಕ ಭಯೋತ್ಪಾದಕನೆಂದು ಘೋಷಿಸಲು ಯುನೈಟೆಡ್ ಸ್ಟೇಟ್ಸ್, ಬ್ರಿಟನ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿತ್ತು. ಆದಾಗ್ಯೂ, ಪಾಕಿಸ್ತಾನಕ್ಕೆ ಬಾಹ್ಯ ಬೆಂಬಲ ನೀಡುತ್ತಿರುವ  ಚೀನಾ ಅದರ ಮೇಲೆ ತಾಂತ್ರಿಕ ಹಿಡಿತ ಸಾಧಿಸುವ ಮೂಲಕ ಅದನ್ನು ಉಳಿಸಲು ಪ್ರಯತ್ನಿಸಿತ್ತು.

ಆದಾಗ್ಯೂ, ಜಾಗತಿಕ ಒತ್ತಡದಿಂದಾಗಿ ಈ ಹಿಡಿತವನ್ನು ನಂತರ ಚೀನಾ ತೆಗೆದುಹಾಕಿತು. ಮೇ ತಿಂಗಳಲ್ಲಿ ವಿಶ್ವಸಂಸ್ಥೆಯು  ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿತ್ತು. (ಎಸ್.ಎಚ್)

Leave a Reply

comments

Related Articles

error: