ಮೈಸೂರು

ಶಿಕ್ಷಕರ ದಿನಾಚರಣೆ : ಪ್ರಶಸ್ತಿ ಪ್ರದಾನ ಸಮಾರಂಭ

ಮೈಸೂರು,ಸೆ.9 : ಎನ್.ಎಂ.ಪಿ. ಅಕಾಡೆಮಿ ವತಿಯಿಂದ ಶಿಕ್ಷಕರ ದಿನಾಚರಣೆ ಹಾಗೂ ಅಕಾಡೆಮಿಯ 3ನೇ ವಾರ್ಷಿಕೋತ್ಸವ ಪ್ರಯುಕ್ತ ಕವನ ಸಂಕಲನ ಬಿಡುಗಡೆ, ಚಟುಕು ಕವಿಗೋಷ್ಠಿ, ವಿದ್ಯಾರ್ಥಿಗಳ ಹಾಗೂ ಹಿರಿಯ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸಲಾಗಿದೆ.

ಸೆ.15ರ ಬೆಳಗ್ಗೆ 10 ಗಂಟೆಗೆ ಐಡಿಯಲ್ ಜಾವಾ ರೋಟರಿ ಶಾಲಾ ಆವರಣದಲ್ಲಿ ಎಂ.ಬಿ.ಸಂತೋಷ್ ಗೆ ವಚನ ಕಣ್ಮಣಿಯನ್ನು ಶಿಕ್ಷಣ ರತ್ನ ಪ್ರಶಸ್ತಿಯನ್ನು ದಿವ್ಯಾ ವಿನಯ್ ಹಾಗೂ ಹರಿಶ್ ಕುಮಾರ್ ಇವರುಗಳಿಗೆ, ಲಯನ್ ಎನ್.ಸರಸ್ವತಿ, ಡಾ.ಕೆ.ಪದ್ಮಮೋಹನ್ ಹಾಗೂ ಡಾ.ನರಸಿಂಹೇಗೌಡ ಅವರುಗಳಿಗೆ ಸಮಾಜ ಸೇವಾ,  ಶಾಂತಕುಮಾರಿ ಇವರಿಗೆ ಸಾಹಿತ್ಯ ಸಿಂಧು, ಮತ್ತು ಸಹನಾ, ಆಯುಷ್, ಗುರುಗೌತಮ್, ಆರ್ಯೇ ವಿಜಯಕುಮಾರ್, ಸಾಕ್ಷಿ ಶೆಟ್ಟಿ, ಭವನ್ ಕುಮಾರ್, ಆದ್ವಿಕಾ ಶ್ರೀಗೌಡ ಗೂ ಮನಿಷ್ ಇವರುಗಳಿಗೆ ನಮ್ ಮೈಸೂರು ಪ್ರತಿಭೆಯನ್ನು ನೀಡಿ ಸನ್ಮಾನಿಸಲಾಗುವುದು ಎಂದು ವ್ಯವಸ್ಥಾಪಕರಾದ ಡಾ.ಸಿ.ತೇಜೋವತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: