ಲೈಫ್ & ಸ್ಟೈಲ್

ಸುಂದರ ಅಂಗಸೌಷ್ಠವ ನಿಮ್ಮದಾಗಲು ಪ್ರಯತ್ನಿಸಿ..!

ಯಾವ ಪುರುಷರಿಗೆ ತಾನು ಸುಂದರವಾಗಿ ಕಾಣಿಸಬೇಕು ಅಂತ ಇರಲ್ಲ. ಎಲ್ಲರಿಗೂ ತಾನು ಸುಂದರವಾಗಿ ಕಾಣಿಸಬೇಕು, ಸಿಕ್ಸ್ ಪ್ಯಾಕ್ ಬೆಳೆಸಬೇಕು. ತೋಳುಗಳು ಬಲಿಷ್ಠವಾಗಿರಬೇಕು ಎಂಬೆಲ್ಲಾ ಆಸೆಗಳಿರುತ್ತವೆ. ನಿಮ್ಮ ಆಸೆಗಳನ್ನು ಈಡೇರಿಸಿಕೊಳ್ಳಲು ಪ್ರತಿದಿನ ಕಡಲೆಕಾಳು ಮತ್ತು ಬೆಲ್ಲವನ್ನು ತಪ್ಪದೇ ಸೇವಿಸಿ. ಸುಂದರ ಅಂಗಸೌಷ್ಠವ ನಿಮ್ಮದಾಗಲಿದೆ.  ಆಗ ನಿಮ್ಮ ಶರೀರವನ್ನು ನೋಡಿ ನೀವೇ ಆಶ್ಚರ್ಯಕ್ಕೊಳಗಾಗುತ್ತೀರಿ.

ಮಾಂಸಖಂಡ : ಕಡಲೆಕಾಳು ಮತ್ತು ಬೆಲ್ಲದಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಗಳಿದ್ದು, ಇದು ಮಾಂಸಖಂಡಗಳನ್ನು ಬಲಿಷ್ಠವಾಗಿರಿಸಲು ಸಹಾಯ ಮಾಡಲಿದೆ.

ದಂತ : ಇದರಲ್ಲಿರುವ ಫಾಸ್ಪರಸ್ ದಂತಪಂಕ್ತಿಯನ್ನು ಬಲಿಷ್ಠವಾಗಿಸಲು ಸಹಾಯಕವಾಗಿದೆ.

ಕಾಂತಿಯುಕ್ತ ತ್ವಚೆ : ಕಡಲೆಕಾಳಿನ ಜೊತೆ ಬೆಲ್ಲವನ್ನು ಸೇವಿಸುವುದರಿಂದ ಶರೀರದಲ್ಲಿನ ಟಾಕ್ಸಿಸನ್ಸ್ ದೂರವಾಗುತ್ತದೆ. ಪುರುಷರ ತ್ವಚೆಯ  ಅಂದವನ್ನು ಹೆಚ್ಚಿಸುವುದಲ್ಲದೇ, ಒಳ್ಳೆಯ ಲುಕ್ ನೀಡಲಿದೆ.

ಬೊಜ್ಜು ನಿವಾರಣೆ : ಬೆಲ್ಲದ ಜೊತೆ ಕಡಲೆಯನ್ನು ತಿಂದರೆ ಶರೀರದಲ್ಲಿ ಮೆಟಾಬಾಲಿಸಂ ಹೆಚ್ಚಲಿದ್ದು, ಹೊಟ್ಟೆಯಲ್ಲಿನ ಬೊಜ್ಜು ಕರಗಿ ಸ್ಲಿಮ್ ಆಗಿ ಕಾಣುವಂತೆ ಮಾಡಲಿದೆ.

ಹೃದಯ ತೊಂದರೆಯಿಲ್ಲ : ಇದರಲ್ಲಿರುವ ಪೊಟ್ಯಾಶಿಯಂನಿಂದಾಗಿ ಹಾರ್ಟ್ ಆಟ್ಯಾಕ್ ಅಥವಾ ಹೃದಯಸಂಬಂಧಿ ತೊಂದರೆಗಳಿಂದ ದೂರವಿರಬಹುದಾಗಿದೆ.

ಮಂಡಿನೋವು ಶಮನ : ಇದರಲ್ಲಿ ಹೇರಳವಾಗಿ ಕ್ಯಾಲ್ಶಿಯಂ ಇರಲಿದೆ. ಇದರಿಂದ ಮಂಡಿಯಲ್ಲಿನ ಎಲುಬುಗಳು ಸವಕಳಿಯಾಗದಂತೆ ನೋಡಿಕೊಳ್ಳುವುದಲ್ಲದೇ, ಎಲುಬುಗಳು ಬಲಿಷ್ಠವಾಗಲಿವೆ.

ಬುದ್ಧಿ ಶಕ್ತಿ ಹೆಚ್ಚಳ : ಇದರಲ್ಲಿ ವಿಟಾಮಿನ್ ಬಿ6 ಹೇರಳವಾಗಿದ್ದು, ಇದರಿಂದ ಬುದ್ಧಿಶಕ್ತಿ ಪ್ರಬಲವಾಗಲಿದ್ದು, ನೆನಪಿನ ಶಕ್ತಿ ಹೆಚ್ಚಲಿದೆ.

ಮುಖದಲ್ಲಿ ಕಾಂತಿ : ಕಡಲೆಕಾಳು ಮತ್ತು ಬೆಲ್ಲದಲ್ಲಿ ಜಿಂಕ್ ಅಂಶವಿದ್ದು, ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ. ಇದನ್ನು ಸೇವಿಸುವುದರಿಂದ ಸೌಂದರ್ಯ ಹೆಚ್ಚಲಿದೆ.

ಒತ್ತಡ ನಿವಾರಣೆ : ಇದರಲ್ಲಿ ಅಮಿನೊ ಆ್ಯಸಿಡ್ಸ್, ಟ್ರಿಪ್ಟೊಫೆನ್ ಮತ್ತು ಸೆರೆಟೋನಿನ್ ಇರಲಿದೆ. ಇದರಲ್ಲಿ ಒತ್ತಡ ಕಡಿಮೆ ಮಾಡುವ ಅಂಶವಿದ್ದು, ಮಾನಸಿಕ ಖಿನ್ನತೆಯಿಂದ ದೂರವಿರಲು ಸಹಕರಿಸಲಿದೆ. ಒಟ್ಟಿನಲ್ಲಿ ಕಡಲೆ ಮತ್ತು ಬೆಲ್ಲ ಪುರುಷರಲ್ಲಿನ ಸೌಂದರ್ಯವನ್ನು ಹೆಚ್ಚಿಸಲಿದೆ.

 

Leave a Reply

comments

Related Articles

error: