ಮನರಂಜನೆ

ಗಂಡು ಮಗುವಿಗೆ ಜನ್ಮ ನೀಡಿದ ‘ಮಜಾ ಟಾಕೀಸ್’ ರಾಣಿ ಶ್ವೇತಾ ಚೆಂಗಪ್ಪ

ರಾಜ್ಯ(ಬೆಂಗಳೂರು)ಸೆ.10:- ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಜಾ ಟಾಕೀಸ್ ರಾಣಿ, ನಿರೂಪಕಿ ಹಾಗೂ ನಟಿ ಶ್ವೇತಾ ಚೆಂಗಪ್ಪ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದು, ‘ನಾವೀಗ ಮೂವರು’ ಎಂದಿದ್ದಾರೆ. ತಂದೆ ತಾಯಿ, ಕುಟುಂಬ, ಗೆಳೆಯರ ಪ್ರೀತಿ ಮತ್ತು ಆಶೀರ್ವಾದ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ಇಂದು ಕಿರಣ್ ಮತ್ತು ನಾನು ಸಂಭ್ರಮವನ್ನು ಬರಮಾಡಿಕೊಂಡಿದ್ದೇವೆ. ನಮಗೆ ಗಂಡು ಮಗುವಾಗಿದೆ. ನಾವೀಗ ಮೂವರು” ಎಂದಿದ್ದಾರೆ.

ಮಗುವಿನ ಬೆರಳು ಹಿಡಿದಿರುವ ಮುದ್ದಾದ ಫೋಟೋವನ್ನೂ ಹಂಚಿಕೊಂಡಿದ್ದಾರೆ. ಶ್ವೇತಾ ಚೆಂಗಪ್ಪ ಪೋಸ್ಟ್‌ಗೆ ಅಭಿಮಾನಿಗಳಿಂದ ಶುಭಾಶಯಗಳ  ಮಹಾಪೂರವೇ ಹರಿದು ಬರುತ್ತಿದೆ.

ಸೃಜನ್ ಲೋಕೇಶ್ ನಿರ್ದೇಶನದ ‘ಮಜಾ ಟಾಕೀಸ್‌’ನಲ್ಲಿ ರಾಣಿ ಪಾತ್ರದಲ್ಲಿ ಕಾಣಿಸಿಕೊಂಡು ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದ ಶ್ವೇತಾ  ಗರ್ಭಿಣಿಯಾದ ಬಳಿಕ ವಿರಾಮ ತೆಗೆದುಕೊಂಡಿದ್ದಾರೆ. ತಂಗಿಗಾಗಿ ಮತ್ತು ವರ್ಷ ಎಂಬ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: