ಕ್ರೀಡೆ

ಬ್ಯಾಡ್ಮಿಂಟನ್: ಡೆಂಗ್ಯೂ ಕಾರಣದಿಂದಾಗಿ   ಚೀನಾ ಮತ್ತು ಕೊರಿಯಾ ಓಪನ್‌ನಿಂದ ಹಿಂದೆ ಸರಿದ ಪ್ರಣಯ್

ದೇಶ(ನವದೆಹಲಿ)ಸೆ.10:- ಬ್ಯಾಡಮಿಂಟನ್ ಆಟಗಾರ ಎಚ್‌ಎಸ್ ಪ್ರಣಯ್ ಡೆಂಗ್ಯೂ ನಿಂದ ಬಳಲುತ್ತಿರುವ ಕಾರಣ   ಕನಿಷ್ಠ ಎರಡು ಪಂದ್ಯಾವಳಿಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ.

ಸೆಪ್ಟೆಂಬರ್ 17 ರಿಂದ 22 ರವರೆಗೆ ಚಾಂಗ್ ಝೂದಲ್ಲಿ ನಡೆಯುವ ಚೀನಾ ಓಪನ್‌ನಲ್ಲಿ ಮತ್ತು ನಂತರ ಸೆಪ್ಟೆಂಬರ್ 24 ರಿಂದ 29 ರವರೆಗೆ ಇಂಚಿಯಾನ್‌ನಲ್ಲಿ ನಡೆಯುವ ಕೊರಿಯಾ ಓಪನ್‌ನಲ್ಲಿ ಪ್ರಣಯ್ ಆಡುವುದಿಲ್ಲ ಎನ್ನಲಾಗಿದೆ.

ಅವರು ತಮ್ಮ ಆರೋಗ್ಯ ಮಾಹಿತಿಯನ್ನು ಟ್ವೀಟರ್ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದು. “ಡೆಂಗ್ಯೂ ಚಿಕಿತ್ಸೆಯ ನಂತರ ನಾನು ಕೆಲವು ದಿನಗಳವರೆಗೆ ಆಟದಿಂದ ಹೊರಗುಳಿಯುತ್ತೇನೆ” ಮುಂದಿನ ವಾರ ಚೀನಾ ಮತ್ತು ಕೊರಿಯಾಕ್ಕೆ ಹೋಗುವ ಭಾರತೀಯ ತಂಡದಲ್ಲಿ ಭಾಗಿಯಾಗುವುದಿಲ್ಲ.  ಶೀಘ್ರದಲ್ಲೇ ಆರೋಗ್ಯವಂತನಾಗಿ ಮರಳುತ್ತೇನೆಂಬ ಭರವಸೆಯಿದೆ ಎಂದಿದ್ದಾರೆ. (ಎಸ್.ಎಚ್)

 

Leave a Reply

comments

Related Articles

error: