ಪ್ರಮುಖ ಸುದ್ದಿಮನರಂಜನೆ

ಕ್ಯಾನ್ಸರ್  ಚಿಕಿತ್ಸೆ ಪಡೆದು 11ತಿಂಗಳು 11ದಿನಗಳ ಬಳಿಕ ಭಾರತಕ್ಕೆ ಮರಳಿದ ಬಾಲಿವುಡ್ ನಟ  ರಿಷಿ ಕಪೂರ್

ದೇಶ(ನವದೆಹಲಿ)ಸೆ.10:- ಬಾಲಿವುಡ್ ನಟ ರಿಷಿ ಕಪೂರ್ ಕ್ಯಾನ್ಸರ್ ಚಿಕಿತ್ಸೆ ಪಡೆದ ನಂತರ ಭಾರತಕ್ಕೆ ಮರಳಿದ್ದಾರೆ. ಇಂದು  ಬೆಳಿಗ್ಗೆ ರಿಷಿ ಕಪೂರ್ ಮತ್ತು ನೀತು ಕಪೂರ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ.

1 ವರ್ಷದ ನಂತರ ಹಿಂದಿರುಗಿದ ರಿಷಿ ಕಪೂರ್ ಸಂತೋಷದಿಂದ ಕಂಡು ಬಂದಿದ್ದು,  ಅವರು ಮೊದಲಿಗಿಂತ ಸ್ವಲ್ಪ ಬದಲಾದಂತೆ ಕಂಡು ಬಂದಿದ್ದು, ಅವರ ಮುಖದಲ್ಲಿ ಗಡ್ಡವಿತ್ತು.  ಸ್ವಲ್ಪ ದಣಿದಂತೆ ಕಾಣುತ್ತಿದ್ದರು, ಅವರ ಮುಖದಲ್ಲಿನ ಮಂದಹಾಸ  ಸ್ವದೇಶಕ್ಕೆ ಮರಳಿರುವುದು ತುಂಬಾ ಸಂತೋಷವಾಗಿದೆ ಎಂದು ಹೇಳುವಂತ್ತಿತ್ತು.

ರಿಷಿ ಅವರೊಂದಿಗೆ ಪತ್ನಿ ನೀತು ಕಪೂರ್ ಕೂಡ ಇದ್ದರು. ನೀತು ರಿಷಿ ಕಪೂರ್ ಕೈ ಹಿಡಿದುಕೊಂಡೇ ಬಂದಿದ್ದು,   ಇಬ್ಬರ ಮುಖದಲ್ಲಿಯೂ  ಸುಂದರವಾದ ನಗುವಿತ್ತು.

ರಿಷಿ ಕಪೂರ್ ಅವರ   ಕಷ್ಟದ ದಿನಗಳಲ್ಲಿ ಅವರ ಪತ್ನಿ ನೀತು ಅವರ ಬೆನ್ನೆಲುಬಾಗಿ ನಿಂತಿದ್ದು, ಚಿಕಿತ್ಸೆಯ ಉದ್ದಕ್ಕೂ ಅವರೊಂದಿಗಿದ್ದರು.  (ಎಸ್.ಎಚ್)

Leave a Reply

comments

Related Articles

error: