ಪ್ರಮುಖ ಸುದ್ದಿ

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಗೆ ಸದ್ಯಕ್ಕಿಲ್ಲವಂತೆ ಬಿಡುಗಡೆ ಭಾಗ್ಯ

ದೇಶ(ನವದೆಹಲಿ)ಸೆ.10:-  ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಪ್ರಸ್ತುತ  ಜಾರಿ ನಿರ್ದೇಶನಾಲಯ(ಇಡಿ)ದ ವಶದಲ್ಲಿದ್ದು, ​ಅವರಿಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗಿದೆ.

ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಮತ್ತೆ 4 ದಿನ ವಶಕ್ಕೆ ಕೇಳಲು ತಯಾರಿ ನಡೆಸಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಕುರಿತು ಕೋರ್ಟ್​​ನಲ್ಲಿ ಮನವಿ ಮಾಡಲಿದ್ದಾರಂತೆ, ಈಗಾಗಲೇ ಇಡಿ ಅಧಿಕಾರಿಗಳು ವಕೀಲರಿಗೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.  ಇಡಿ ಅಧಿಕಾರಿಗಳು ಡಿಕೆಶಿ ಅವರನ್ನು ಇನ್ನು 4 ದಿನ ವಶಕ್ಕೆ ಪಡೆಯಲು ಅವಕಾಶವಿದೆ. ಕೋರ್ಟ್​ನಲ್ಲಿ ಒಟ್ಟು 14 ದಿನಗಳ ಕಾಲ ವಶಕ್ಕೆ ಪಡೆಯಲು ಮನವಿ ಮಾಡಿದ್ದರು. ಆದರೆ ಕೋರ್ಟ್​​ 10 ದಿನ ಮಾತ್ರ ಡಿಕೆಶಿ ಅವರನ್ನು ಇಡಿ ಅಧಿಕಾರಿಗಳ ವಶಕ್ಕೆ ನೀಡಿತ್ತು. ಈಗ ಉಳಿದ ನಾಲ್ಕು ದಿನಗಳಿಗೆ ಇಡಿ ಅಧಿಕಾರಿಗಳು ಕೋರ್ಟ್​​​ನಲ್ಲಿ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: