ಪ್ರಮುಖ ಸುದ್ದಿಮೈಸೂರು

ಸೆ.12 ರಿಂದ ನಗರದಲ್ಲಿ ಆದಿವಾಸಿ ಜನರ ಹಕ್ಕು ಘೋಷಣಾ ದಿನಾಚರಣೆ : ರಾಷ್ಟ್ರಮಟ್ಟದ ಸಮಾವೇಶ

ಮೈಸೂರು. ಸೆ.10:  ಭಾರತದ ಆದಿವಾಸಿ ಸಮನ್ವಯ ಮಂಚ್, ರಾಜ್ಯದ ಮೂಲ ಆದಿವಾಸಿ ವೇದಿಕೆ ಹಾಗೂ ಇತರ ಆದಿವಾಸಿ ಸಂಘಟನೆಗಳ ಸಹಯೋಗದಲ್ಲಿ “ಆದಿವಾಸಿ ಜನರ ಹಕ್ಕು ಘೋಷಣಾ ದಿನಾಚರಣೆ 2019 ಅನ್ನು ಸೆ.12 ಮತ್ತು 13 ರಂದು‌ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮ ರಾಜ್ಯ ಸಂಯೋಜಕ ವಿಜಯ್ ಕುಮಾರ್ ಹೇಳಿದರು.

ಸೆ.12ರ ಬೆಳಗ್ಗೆ 9.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಚಾಲನೆ ನೀಡಲಿದ್ದು ದೇಶದ 22 ರಾಜ್ಯಗಳ ವಿಚಾರವಾದಿಗಳು ಭಾಗಿಯಾಗಿ ಚಿಂತನ ಮಂಥನ ನಡೆಸಲಿಸಲಿದ್ದು ಸುಮಾರು ಸಾವಿರಕ್ಕೂ ಹೆಚ್ಚು ಆದಿವಾಸಿಗಳು ಪಾಲ್ಗೊಳ್ಳಲಿದ್ದಾರೆ  ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಧ್ಯಪ್ರದೇಶದ ಆದಿವಾಸಿ ಬುಡಕಟ್ಟು ಕಲ್ಯಾಣಾಭಿವೃದ್ಧಿ ಸಚಿವ ಓಂಕರ್ ಸಿಂಗ್ ಮರ್ಕಂ, ಜೆನ್.ಯು ವಿವಿಯ ಡಾ.ಅಭಯ್ , ಮೈಸೂರು ವಿವಿಯ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಹಂಪಿ ವಿವಿಯ ವಿಶ್ರಾಂತ ಕುಲಪತಿ ಹಿ.ಚಿ.ಬೋರಲಿಂಗಯ್ಯ, ಸಂಸದರಾದ ಶ್ರೀನಿವಾಸ ಪ್ರಸಾದ್, ಪ್ರತಾಪ್ ಸಿಂಹ, ವಲಯ ಆಯುಕ್ತರಾದ ವಿ.ಯಶವಂತ್ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು

ದಿ.13ರ ಬೆಳಗ್ಗೆ 9.30 ಕೋಟೆ ಆಂಜನೇಯ ದೇವಸ್ಥಾನದಿಂದ ಬುಡಕಟ್ಟು ಜನಾಂಗ ಕಲಾವಿದರಿಂದ ಕಲಾಜಾಥಾ ಮೆರವಣಿಯಲ್ಲಿ ಸುಮಾರು 700 ಪಂಗಡಗಳ ಭಾಗಿಯಾಗಲಿದ್ದು ರಾಜವಂಶಸ್ಥರಾದ ಯದುವೀರ್ ಕೃಷ್ಣರಾಜ ಒಡೆಯರ್, ಶಾಸಕ ಎಸ್.ಎ.ರಾಮದಾಸ್,ಹಾಗೂ ಇತರರು ಹಾಜರಿರುವರು.

ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಪ್ರೊ.ಮುಸಾಫರ್ ಅಸಾಧಿ, ತುಮಕೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಹಾಗೂ ಇತರ ಗಣ್ಯರು ಭಾಗಿಯಾಗುವರು.

ಈ ಎರಡು ದಿನಗಳಲ್ಲಿ ಆದಿವಾಸಿ ಬುಡಕಟ್ಟು ಸಮಾಜಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರ ಗೋಷ್ಠಿಗಳು ನಡೆಯಲಿದ್ದು ರಾಜ್ಯದ ಬಗ್ಗೆ ಒಳಮೀಸಲಾತಿ, ಅರಣ್ಯ ಹಕ್ಕು ಕಾಯ್ದೆ, ಹಾಗೂ ಡಾ.ಮುಜಾಫರ್ ಅಸಾಧಿ ವರದಿ ಬಗ್ಗೆ ಚಿಂತಕರು ವಿಚಾರ ಮಂಡಿಸಲಿದ್ದಾರೆ. ಇದೊಂದು ರಾಷ್ಟಮಟ್ಟದ ಸಮಾವೇಶವಾಗಿದೆ ಎಂದು ತಿಳಿಸಿದರು.

ಆದಿವಾಸಿ ಸಮನ್ವಯ್ ಮಂಚ್ ಗುಜರಾತ್ ನ ಅಶೋಕ್ ಚೌಧುರಿ, ಒರಿಸ್ಸಾದ ನಿಕೊಲಾಸ್ ಬಾರ್ ಲಾ, ರಾ.ಮೂ.ಆ.ವೇದಿಕೆ ಅಧ್ಯಕ್ಷ ಕೆ.ಎನ್.ವಿಠ್ಠಲ್ ಹಾಗೂ ಇತರರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: