ಮೈಸೂರು

ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಂಚಾರ ನಿಯಮ ಉಲ್ಲಂಘನೆ : ಕಾರು ಚಾಲಕನಿಗೆ ಹತ್ತು ಸಾವಿರ ರೂ.ದಂಡ

ಮೈಸೂರು,ಸೆ.10:-ಡ್ರಿಂಕ್ ಅಂಡ್ ಡ್ರೈವ್ ಮಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಕಾರು ಚಾಲಕನೋರ್ವನಿಗೆ ನ್ಯಾಯಾಲಯದಲ್ಲಿ  ಹತ್ತು ಸಾವಿರ ರೂ.ದಂಡ ವಿಧಿಸಲಾಗಿದೆ.

ಬೀಚನಹಳ್ಳಿ ಮೂಲದ ಚಾಲಕ ಕಳೆದ‌ ಎರಡು ದಿನಗಳ ಹಿಂದಷ್ಟೇ ಹ್ಯಾಂಡ್ ಪೋಸ್ಟ್ ಬಳಿ ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ. ಈ ವೇಳೆ ಎಚ್.ಡಿ ಕೋಟೆ ಪೊಲೀಸ್ ಇನ್ಸ ಪೆಕ್ಟರ್ ಎಂ.ನಾಯಕ್ ಅವರು  ತಪಾಸಣೆ ನಡೆಸಿ ವಾಹನವನ್ನು ವಶಕ್ಕೆ ಪಡೆದು‌ ಪ್ರಕರಣ ದಾಖಲಿಸಿದ್ದರು.

ಇದೀಗ ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ನೂತನ ದರದಂತೆ ಮದ್ಯ ಸೇವನೆ ಮಾಡಿ ಕಾರು ಚಾಲನೆ ಮಾಡುತ್ತಿದ್ದ ಚಾಲಕನಿಗೆ 10ಸಾವಿರ‌ ರೂ. ದಂಡ ವಿಧಿಸಲಾಗಿದೆ. ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಮಹಮ್ಮದ್ ಶಾಹಿದ್ ಚೌತಾಯಿ ದಂಡ ವಿಧಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: