ಪ್ರಮುಖ ಸುದ್ದಿಮನರಂಜನೆ

ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್

ದೇಶ(ನವದೆಹಲಿ)ಸೆ.10:- ಸುಮಾರು ಆರು ತಿಂಗಳ ಸುದೀರ್ಘ ಅವಧಿಯ ನಂತರ ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಜನಪ್ರಿಯ ಬಾಲಿವುಡ್ ನಟಿ ಊರ್ಮಿಳಾ 2019 ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಮುಂಬೈ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದರು.  ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದೇನೆ.   ಮೇ 16 ರ ನನ್ನ ಪತ್ರದ ಅನುಸಾರವಾಗಿ ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ಆಗಿನ ಮುಂಬೈ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ಡಿಯೋರಾ ಅವರಿಗೆ  ರಾಜೀನಾಮೆ ನೀಡುವ ಆಲೋಚನೆ ಬಂದಿತ್ತು.  ಗೌಪ್ಯವಾಗಿರಬೇಕಾದ ಪತ್ರವು ಮಾಧ್ಯಮಗಳಿಗೆ ಸೋರಿಕೆಯಾಗಿದೆ.   ನನ್ನ ಪ್ರಕಾರ ಅದು ದ್ರೋಹವಾಗಿದೆ  ಎಂದು ಮಾತೋಂಡ್ಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪಕ್ಷದಿಂದ ಯಾರೂ ಕ್ಷಮೆಯಾಚಿಸಿರಲಿಲ್ಲ. ನನ್ನ ಬಗ್ಗೆ ಕಾಳಜಿ ವಹಿಸಲಿಲ್ಲ. ಮುಂಬೈ ನಾರ್ತ್‌ನಲ್ಲಿ ಐಎನ್‌ಸಿಯ ಕಳಪೆ ಪ್ರದರ್ಶನಕ್ಕಾಗಿ ನನ್ನ ಪತ್ರದಲ್ಲಿ ನಿರ್ದಿಷ್ಟವಾಗಿ ಹೆಸರಿಸಲಾದ ಕೆಲವು ವ್ಯಕ್ತಿಗಳಿಗೆ ಅವರ ಕಾರ್ಯಗಳು ಮತ್ತು ಲೋಪಗಳಿಗೆ ಜವಾಬ್ದಾರರಾಗಿರುವ ಬದಲು ಹೊಸ ಸ್ಥಾನಗಳನ್ನು ನೀಡಲಾಗಿದೆ. ಮುಂಬೈ ಕಾಂಗ್ರೆಸ್ನ ಪ್ರಮುಖ ಕಾರ್ಯಕರ್ತರು ಪಕ್ಷದ ಸುಧಾರಣೆಗಾಗಿ ಸಂಘಟನೆಯಲ್ಲಿ ಬದಲಾವಣೆ ಮತ್ತು ರೂಪಾಂತರವನ್ನು ತರಲು ಅಸಮರ್ಥರಾಗಿದ್ದಾರೆ ಅಥವಾ ಬದ್ಧರಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: