ಮೈಸೂರು

ನಟಿಮಣಿಯರಿಂದ ತರಕಾರಿ ಖರೀದಿ: ಶಾಪಿಂಗ್ ಮೇಳಕ್ಕೆ ಚಾಲನೆ

ಶನಿವಾರ ಬೆಳ್ಳಂಬೆಳಿಗ್ಗೆ ಮೈಸೂರಿನ ಮಹಾತ್ಮಾಗಾಂಧಿ ರಸ್ತೆಯಲ್ಲಿ ತೆರಳುವವರ ಮನಸ್ಸಿನಲ್ಲಿ ಹೀಗೊಂದು ಪ್ರಶ್ನೆ ಮೂಡಿತ್ತು. ಅದೇನೆಂದರೆ ಬೆಂಗಳೂರಿನಲ್ಲಿ ತರಕಾರಿಗಳು ಬರುತ್ತಿಲ್ಲವಾ? ತರಕಾರಿಗಳನ್ನು ಕೊಳ್ಳೋಕೆ ಮೈಸೂರಿಗೆ ಬರಬೇಕಾ? ಅಥವಾ ಇಲ್ಲಿ ಬೆಂಗಳೂರಿನಲ್ಲಿ ಸಿಗೋದಕ್ಕಿಂತಲೂ  ಚೆನ್ನಾಗಿರೋ ತರಕಾರಿ ಸಿಗತ್ತಾ? ಬಹುಶ: ನೋಡಿದವರಿಗೆಲ್ಲ  ಹಾಗಂತ ಅನ್ನಿಸಿರಲೇ ಬೇಕು. ಆದರೆ ಇಲ್ಲಿ ವಿಷಯಾನೇ ಬೇರೆ ಇದೆ. ಕನ್ನಡದ ಜನಪ್ರಿಯ ಚಲನಚಿತ್ರ ನಟಿ ಮಣಿಯರಾದ ಶೃತಿ, ಶ್ವೇತಾ ಶ್ರೀವಾಸ್ತವ್ ಹಾಗೂ ರೂಪದರ್ಶಿ ಅಮೃತಾ,  ತಾಜಾ ತಾಜಾ ತರಕಾರಿಗಳನ್ನು ಕೊಳ್ಳುವ ಮೂಲಕ ಮಹಾತ್ಮಾಗಾಂಧಿ ರಸ್ತೆಯಲ್ಲಿ 43 ದಿನಗಳ ಕಾಲ ನಡೆಯುವ ಮೈಸೂರು ಶಾಂಪಿಂಗ್ ಮೇಳಕ್ಕೆ ಚಾಲನೆ ನೀಡಿದರು. ಬಳಿಕ ಶಾಪಿಂಗ್ ಮೇಳದ ಲಕ್ಕಿ ಕೂಪನ್ ಬಿಡುಗಡೆಗೊಳಿಸಿದರು. ನಂತರ  ಮಾತನಾಡಿದ ಅವರು ರೈತರು ಬೆಳೆದ ತಾಜಾ ತರಕಾರಿಗಳನ್ನು ಖರೀದಿಸಿದರು. ರೈತರು ಬೆಳೆದ ತರಕಾರಿಗಳನ್ನು ಅವರಿಂದಲೇ ಖರೀದಿಸಿ ಪ್ರೋತ್ಸಾಹಿಸಬೇಕು. ಶಾಪಿಂಗ್ ಮೇಳಕ್ಕೆಂದು ಮೈಸೂರಿಗೆ ಬಂದು ತರಕಾರಿ ಖರೀದಿಸಿರುವುದು ತುಂಬಾ ಖುಷಿ ನೀಡಿದೆ ಎಂದರು.

ಸೆಪ್ಟೆಂಬರ್ 24ರಿಂದ ನವಂಬರ್ 5ರವರೆಗೆ ಶಾಪಿಂಗ್ ಮೇಳ ನಡೆಯಲಿದೆ. ಇಂದಿನ ಪರಿಸ್ಥಿತಿಯಲ್ಲಿ ರೈತರನ್ನು ಬೆಂಬಲಿಸಲು ಹಾಗೂ ಈ ಕುರಿತು ಜಾಗೃತಿ ಮೂಡಿಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.

Leave a Reply

comments

Tags

Related Articles

error: