ವಿದೇಶ

ಪಾಕಿಸ್ತಾನ ಕೋರ್ಟ್ ಆವರಣದಲ್ಲಿ ಮತ್ತೆ ಸರಣಿ ಬಾಂಬ್ ಸ್ಫೋಟ: 6 ಜನ ದುರ್ಮರಣ

ಪೇಶಾವರ: ಕೋರ್ಟ್‍ ಆವರಣದಲ್ಲಿ ಸರಣಿ ಆತ್ಮಾಹುತಿ ದಾಳಿಕೋರರು ತಮ್ಮನ್ನು ತಾವು ಸ್ಫೋಟಿಸಿಕೊಂಡದ್ದರಿಂದ 6 ಜನ ಮೃತಪಟ್ಟು 14 ಜನ ಗಾಯಗೊಂಡಿದ್ದಾರೆ.

ಚಾರ್ಸಡ್ಡಾ ನಗರದ ನ್ಯಾಯಾಲಯದ ಆವರಣದಲ್ಲಿ ಓರ್ವ ಆತ್ಮಾಹುತಿ ದಾಳಿಕೋರ ಸ್ಫೋಟಿಸಿಕೊಂಡಿದ್ದಾನೆ. ಮತ್ತೊರ್ವ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಸೋಹಿಲ್ ಖಲೀದ್ ಹೇಳಿದ್ದಾರೆ. ಜಮಾತ್-ಉರ್-ಅರಾರ್ ವಕ್ತಾರ ಅಸಾದ್ ಮನ್ಸೂರ್ ಈ ದಾಳಿಯ ಹೊಣೆ ಹೊತ್ತಿದ್ದಾನೆ.

“ಆತ್ಮಾಹುತಿ ಬಾಂಬ್ ದಾಳಿ ಮೂಲಕ ಪತ್ರಕರ್ತರಿಗೆ ಸಂದೇಶ ರವಾನಿಸಿದ್ದೇನೆ. ನ್ಯಾಯಾಲಯದ ಆವರಣದಲ್ಲಿ ಇನ್ನಷ್ಟು ಆತ್ಮಾಹುತಿ ಬಾಂಬ್ ದಾಳಿಗಳು ನಡೆಯಲಿವೆ” ಎಂದು ಹೇಳಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ತಂದೊಡ್ಡಿದೆ. ದಾಳಿಯಲ್ಲಿ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಕಳೆದ 10 ದಿನಗಳಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 100ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಪಾಕಿಸ್ತಾನ ಪೋಷಿಸಿಕೊಂಡು ಬಂದ ಉಗ್ರವಾದ ಈಗ ಆ ದೇಶಕ್ಕೆ ಕಂಟಕವಾಗಿ ಕಾಡತೊಡಗಿದೆ.

Leave a Reply

comments

Related Articles

error: