ಸುದ್ದಿ ಸಂಕ್ಷಿಪ್ತ

ರಂಗ -ನೃತ್ಯ ತರಬೇತಿ ಸಮಾರೋಪ ನಾಳೆ

ಮೈಸೂರು,ಸೆ.10 : ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯಿಮದ ಸೆ.11ರ ಸಂಜೆ 6.30ಕ್ಕೆ ರಂಗಾಯಣದ ವನರಂಗದಲ್ಲಿ ರಂಗ ಮತ್ತು ನೃತ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಪ್ರೊ.ಚ.ಸರ್ವಮಂಗಳ ಸಮಾರೋಪ ಮಾತುಗಳನ್ನಾಡುವರು, ಬಿ.ಎಂ.ರಾಮಚಂದ್ರ ಪ್ರಮಾಣ ಪತ್ರ ವಿತರಿಸುವರು, ಪ್ರೊ.ರಾಘವೇಂದ್ರ ಮುಖ್ಯ ಅತಿಥಿಯಾಗಿರುವರು, ವಿದ್ಯಾರ್ಥಿಗಳಿಮದ ಜಾನಪದ ನೃತ್ಯ ಪ್ರದರ್ಶನವಿರುವುದು ಎಂದು ಕಾರ್ಯದರ್ಶಿ ಕೃಷ್ಣ ಜನಮನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: