ಸುದ್ದಿ ಸಂಕ್ಷಿಪ್ತ

ಜೆಎಸ್ಎಸ್ ನ ಸಂಸ್ಕೃತೋತ್ಸವ ನಾಳೆ

ಮೈಸೂರು,ಸೆ.10 : ಜೆಎಸ್ಎಸ್ ಮಹಿಳಾ ಕಾಲೇಜು ಮತ್ತು ಪದವಿ ಪೂರ್ವ ಕಾಲೇಜಿನ ಸಂಸ್ಕೃತೋತ್ಸವ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಸೆ.11ರ ಬೆಳಗ್ಗೆ 10.30ಕ್ಕೆ ನವಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಬಸವೇಶ್ವರ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯರಾದ ಡಾ.ಸಿ.ಶಿವಕುಮಾರಸ್ವಾಮಿ ಉದ್ಘಾಟಿಸುವರು, ಶೈವ ಸಂಶೋಧನ ಮತ್ತು ಅಧ್ಯಯನ ಕೇಂದ್ರ ನಿರ್ದೇಶಕ ಡಾ.ಶರತ್ ಚಂದ್ರಸ್ವಾಮೀಜಿ ಉಪನ್ಯಾಸ ನೀಡುವರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ವಿ.ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: