ಮೈಸೂರು

ಅತಿ ಆಸೆಯಿಂದ ಕಾಡಿನ ನಾಶದಲ್ಲಿ ತೊಡಗಿರುವವರನ್ನು ತಡೆಯಬೇಕಿದೆ : ಐಜಿಪಿ ವಿಫುಲ್ ಕುಮಾರ್

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ

ಮೈಸೂರು,ಸೆ.11:- ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಇಲಾಖೆಯ ನಿರ್ದೇಶನದ ಮೇರೆಗೆ ಸೆ.11ರಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನವೆಂದು ಘೋಷಿಸಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ದೇಶದ ಅರಣ್ಯ ಅರಣ್ಯ ಮತ್ತು ವನ್ಯ ಜೀವಿಗಳ ಸಂರಕ್ಷಣೆಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನಗಳ ಸ್ಮರಣೆಗಾಗಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಿದ್ದು,  ಮೈಸೂರು ಅರಣ್ಯ ವೃತ್ತ ಮೈಸೂರು ವಿಭಾಗವತಿಯಿಂದ ಅರಣ್ಯ ಭವನದ ಆವರಣದಲ್ಲಿರುವ ಅರಣ್ಯ ಹುತಾತ್ಮರ ಸ್ಮಾರಕವಿರುವ ದಿ.ವೆಂಕಟಸ್ವಾಮಿ ಉದ್ಯಾನವನದಲ್ಲಿಂದು ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಆಚರಿಸಲಾಯಿತು.

ದಕ್ಷಿಣವಲಯ ಐಜಿಪಿ ವಿಫುಲ್ ಕುಮಾರ್  ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಗೌರವ ಅರ್ಪಿಸಿದರು. ಬಳಿಕ ಮಾತನಾಡಿದ ಅವರು ಸಮಾಜದ ರಕ್ಷಣೆಯಲ್ಲಿ ತೊಡಗುವ ಪೊಲೀಸರಷ್ಟೇ ಜವಾಬ್ದಾರಿ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗಿದೆ. ಅವರು ತಮ್ಮ ಜೀವದ ಹಂಗು ತೊರೆದು ಅರಣ್ಯ ಸಂರಕ್ಷಣೆ ಮತ್ತು ವನ್ಯ ಜೀವಿಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದರು. ನಾವು ಕಳ್ಳರನ್ನು ಹಿಡಿಯುವುದಕ್ಕೆ, ಸಮಾಜದ ರಕ್ಷಣೆ ಮಾಡುವುದಕ್ಕೆ ಸಂಬಳ ಕೊಡುತ್ತಾರೆ. ಆದರೆ  ಆರಣ್ಯ ಇಲಾಖೆ ಸಿಬ್ಬಂದಿಗಳಿಗೆ ಅರಣ್ಯವನ್ನು ರಕ್ಷಣೆ ಮಾಡುವುದಕ್ಕೆ ಸಂಬಳ ಕೊಡುತ್ತಾರೆ.  ಈ ಅರಣ್ಯ ಇಲಾಖೆಯ ಸಿಬ್ಬಂದಿಗಳ ವೃತ್ತಿ ಶ್ರೇಷ್ಠವಾದುದ್ದು. ನಾವು ಒಂದು ರೀತಿಯಲ್ಲಿ ಕಾಡು ಜನರ ರೀತಿಯಲ್ಲಿ ವರ್ತಿಸಬೇಕು. ಏಕೆಂದರೆ ಅವರು ಕಾಡಿನ ಒಳಗೆ ಇದ್ದು ಕಾಡಿನ ರಕ್ಷಣೆ ಮಾಡುತ್ತಾರೆ. ಅದೇ ರೀತಿ ನಾವು ಕೂಡ ಇರಬೇಕು. ಕೆಲವರು ತಮ್ಮ ಅತಿ ಆಸೆಯಿಂದ ಕಾಡಿನ ನಾಶದಲ್ಲಿ ತೊಡಗಿದ್ದಾರೆ. ಅವರನ್ನು ನಾವು ತಡೆಯಬೇಕಿದೆ. ಹಸಿರು ಕ್ಯಾಪ್ ಆಗಿದ್ದವರು ಒಂದು ರೀತಿಯ ಹಸಿರು ಸೇನೆ. ಈ ಸೇನೆ ದೊಡ್ಡದಾಗಬೇಕಿದೆ. ಸಾರ್ವಜನಿಕರು ಸಹ ಅವರಿಗೆ ಕೈ ಜೋಡಿಸಬೇಕಿದೆ ಎಂದರು.

ಹುತಾತ್ಮ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗಾಗಿ ಮೂರು ಸುತ್ತುಗಳ ಕುಶಾಲ ತೋಪುಗಳನ್ನ ಸಿಡಿಸುವ ಮೂಲಕ ಗೌರವ ಸಮರ್ಪಿಸಲಾಯಿತು. ಅರಣ್ಯ ಸಂರಕ್ಷಣೆಗಾಗಿ ತಮ್ಮ ಪ್ರಾಣ ತ್ಯಜಿಸಿದ ನಲವತ್ತೇಳು ಮಂದಿಯನ್ನು ಸ್ಮರಿಸಲಾಯಿತು.

ಈ ಸಂದರ್ಭ ಸಹಾಯಕ ಪೊಲೀಸ್ ಅಧೀಕ್ಷಕರಾದ ಕ್ಷಮಾ ಮಿಶ್ರ, ಎಪಿಸಿಸಿಎಫ್ ಜಗತ್ ರಾಮ್, ಐಎಫ್ ಎಸ್ ಅಧಿಕಾರಿಗಳಾದ ಹೀರಾಲಾಲ್, ಡಾ.ಪ್ರಶಾಂತ್ ಕುಮಾರ್, ಡಿಸಿಎಫ್ ಗಳಾದ ಪೂವಯ್ಯ, ಅಲೆಕ್ಸಾಂಡರ್, ಭಾನುಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: