ಮೈಸೂರು

ಭಾರೀ ಮಳೆಯಿಂದ ಕುಸಿದಿದ್ದ ಮೈಸೂರಿನ ಸರಸ್ವತಿಪುರಂನ ಅಗ್ನಿಶಾಮಕದಳ ಕಟ್ಟಡ ಮರು ನಿರ್ಮಾಣ ಮಾಡಲು ನಿರ್ಧಾರ

ಮೈಸೂರು,ಸೆ.11:- ಇತ್ತೀಚೆಗೆ ಭಾರೀ ಮಳೆಯಿಂದಾಗಿ ಕುಸಿದಿದ್ದ ಮೈಸೂರಿನ ಸರಸ್ವತಿಪುರಂನ ಅಗ್ನಿಶಾಮಕದಳ ಕಟ್ಟಡವನ್ನು ಮರು ನಿರ್ಮಾಣ ಮಾಡಲು ನಿರ್ಧಾರ ಮಾಡಲಾಗಿದೆ.

ನಗರದ ಸರಸ್ವತಿಪುರಂನಲ್ಲಿನ ಅಗ್ನಿಶಾಮಕದಳ ಕಟ್ಟಡ ಭಾರೀ ಮಳೆಯಿಂದಾಗಿ ಕುಸಿದಿತ್ತು.   ಅಂದು ಯಾವುದೇ ಅಪಾಯ ಸಂಭವಿಸಿರಲಿಲ್ಲ . ಇದೀಗ ಅಗ್ನಿಶಾಮಕದಳದ ಕಟ್ಟಡವನ್ನು ಮರು ನಿರ್ಮಾಣ ಮಾಡಲು ಬೆಂಗಳೂರಿನಲ್ಲಿ ನಡೆದ  ಪ್ರಾಚ್ಯವಸ್ತು ಮತ್ತು ಲೋಕೋಪಯೋಗಿ ಹಾಗೂ ಅಗ್ನಿಶಾಮಕ ಅಧಿಕಾರಿಗಳ ನೇತೃತ್ವದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಪಾರಂಪರಿಕ ತಜ್ಞರ ವರದಿ ಬಂದರ ನಂತರ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ನಂತರ ಮರು ನಿರ್ಮಾಣಕ್ಕೆ ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ.  ಈ ಕಟ್ಟಡ ಸುಮಾರು l2O  ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಪಾರಂಪರಿಕ ಕಟ್ಟಡವಾಗಿದ್ದು,  ಮಳೆ ಅವಾಂತರದಿಂದ ಕುಸಿದಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: