ಕ್ರೀಡೆಮೈಸೂರು

ಹ್ಯಾಂಡ್ ಬಾಲ್ ಟೂರ್ನ್‍ ಮೆಂಟ್ ಪ್ರಶಸ್ತಿ ಗಳಿಸಿದ ಮಹಾಜನ ತಂಡ 

ಮೈಸೂರು,ಸೆ.11:- ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಟೆರಿಷಿಯನ್ ಕಾಲೇಜು ವತಿಯಿಂದ ನಡೆದ ಅಂತರ ಕಾಲೇಜು ಹ್ಯಾಂಡ್ ಬಾಲ್ ಟೂರ್ನ್‍ ಮೆಂಟಿನಲ್ಲಿ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಹ್ಯಾಂಡ್ ಬಾಲ್ ಮಹಿಳೆಯರ ತಂಡ ವಿಜೇತರಾಗಿ ಪ್ರಶಸ್ತಿ ಗಳಿಸಿದೆ.

ಆಡಳಿತ ಮಂಡಳಿ, ಪ್ರಾಂಶುಪಾಲರು, ದೈಹಿಕ ಶಿಕ್ಷಣ ನಿರ್ದೇಶಕರುಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ವಿಜೇತ ತಂಡವನ್ನು ಅಭಿನಂದಿಸಿದರು.

ಹ್ಯಾಂಡ್ ಬಾಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ತಂಡದ ನಾಯಕಿ ಲಾವಣ್ಯ, ಸಂಗೀತ, ನಿಖಿತ, ಭವಾನಿ, ಅನಿತಾ, ಭಾವನಾ, ಚೌಂದಮ್ಮ, ನಿಜಿಮೊಲ್ ಸುಪ್ರಿತ, ನಿಸಿಮೊಲ್, ಶರಣ್ಯ, ಗೌತಮಿ, ಅರ್ಚನಾರಾವ್, ಗಾನವಿ ಮತ್ತು ಸೋಮಶೇಖರ ಅವರನ್ನು ವಾಣಿ,  ಜಯಕುಮಾರಿ ಬಿ.ಆರ್, ಪ್ರಭಾರ ಪ್ರಾಂಶುಪಾಲರು, ಡಾ. ಎಸ್. ವೆಂಕಟರಾಮು, ಪ್ರಾಂಶುಪಾಲರು, ಡಾ. ವಿಜಯಲಕ್ಷ್ಮಿ ಮುರಳೀಧರ್, ಗೌ. ಕಾರ್ಯದರ್ಶಿಗಳು, ಮಹಾಜನ ವಿದ್ಯಾಸಂಸ್ಥೆ, ಡಾ. ಹೆಚ್.ಎನ್. ಭಾಸ್ಕರ್, ದೈಹಿಕ ಶಿಕ್ಷಣ ನಿರ್ದೆಶಕರು, ಮಧುಸೂದನ, ದೈಹಿಕ ಶಿಕ್ಷಣ ನಿರ್ದೆಶಕರು, ಡಾ. ಸೋಮಶೇಖರ್ ಕೆ.ಕೆ. ಇವರು ಅಭಿನಂದಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: