ಪ್ರಮುಖ ಸುದ್ದಿ

ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಕಳ್ಳರ ಬಂಧನ

ರಾಜ್ಯ(ತುಮಕೂರು)ಸೆ.11:- ಗುಬ್ಬಿ ಅರಣ್ಯ ವಲಯದ ಹರಗಲದೇವಿ ರಾಜ್ಯ ಅರಣ್ಯದಲ್ಲಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಕಳ್ಳರನ್ನು ಬಂಧಿಸುವಲ್ಲಿ ಗುಬ್ಬಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದೆ.

ತಾಲೂಕಿನ ಉಪ ಅರಣ್ಯ ಸಂರಕ್ಷಣಾಧಿಕಾರಿ   ಗಿರೀಶ್ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಸಿ.ರವಿ ಹಾಗೂ ಉಪ ವಲಯ ಅರಣ್ಯಾಧಿಕಾರಿ ಎಮ್. ಜೆ.ಬಸವರಾಜು ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಕೈಗೊಂಡು ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿಯುತ್ತಿದ್ದ ಬಸವರಾಜು ಬಿನ್ (32) ಲಕ್ಕೇನಹಳ್ಳಿ ವಾಸಿ ಚಿ.ನಾ.ಹಳ್ಳಿ ತಾ.ಹಾಗೂ ಕೆ. ರಂಗಡು (28) ,ಬೇತಚರ್ಲಂ ವಾಸಿ ಕರ್ನೂಲು ಜಿಲ್ಲೆ,ಆಂಧ್ರಪ್ರದೇಶ ಇವರುಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು ಬಂಧಿತರಿಂದ 30ಕೆ.ಜಿ.ಶ್ರೀಗಂಧ ಮತ್ತು ಒಂದು ಬೈಕನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಬ್ಬ ಆರೋಪಿ ರೇಣುಕುಮಾರ್ ಲಕ್ಕೆನಹಳ್ಳಿ ವಾಸಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: