ಮೈಸೂರು

ಜಾಹಿರಾತು ಫಲಕ ಅಳವಡಿಕೆ ನಿಯಮ ಬಾಹಿರವಾಗಿದ್ದರೂ ಶುಭಾಶಯ ಕೋರಿ ಜಾಹಿರಾತು ಫಲಕ ಅಳವಡಿಸಿದ ಪಾಲಿಕೆ ಸದಸ್ಯೆ : ಕಣ್ಮುಚ್ಚಿ ಕುಳಿತ ಪಾಲಿಕೆ

ಮೈಸೂರು,ಸೆ.11:- ಮೈಸೂರು ಮಹಾನಗರ ಪಾಲಿಕೆ ಜಾಹೀರಾತು ಫಲಕಗಳನ್ನು ನಗರದಲ್ಲಿ ಅಳವಡಿಸುವಂತಿಲ್ಲ. ನಗರದ ಅಂದ ಹಾಳಾಗುತ್ತದೆ ಎಂದು ಹೇಳಿತ್ತು. ಆದರೆ ನಿಯಮ ಗಾಳಿಗೆ ತೂರಿ ಮಹಾನಗರ ಪಾಲಿಕೆಯ ಸದಸ್ಯರೋರ್ವರು ಶಾಸಕರ ಜನ್ಮದಿನಕ್ಕೆ ಶುಭಕೋರಿ ಹಾಕಿಸಿದ ಜಾಹೀರಾತು ಫಲಕ ಮೆಟ್ರೋಫೋಲ್ ವೃತ್ತದಿಂದಲೇ ರಾರಾಜಿಸುತ್ತಿದೆ.

ಇಂದು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರ ಜನ್ಮದಿನವಿದ್ದು, ಪಾಲಿಕೆಯ ಸದಸ್ಯೆ ಪ್ರಮಿಳಾ ಭರತ್ ಎಂಬವರು ಶಾಸಕ ನಾಗೇಂದ್ರ, ಸಚಿವ ವಿ.ಸೋಮಣ್ಣ ಖುದ್ದು ತನ್ನ ಭಾವಚಿತ್ರ ಸೇರಿದಂತೆ ಬಿಜೆಪಿ ಪ್ರಮುಖರ ಭಾವಚಿತ್ರ ಅಳವಡಿಸಲಾದ ಜಾಹೀರಾತು ಫಲಕವನ್ನು ವಿದ್ಯುತ್ ಕಂಬಗಳಲ್ಲಿ ಅಳವಡಿಸಿದ್ದು, ಮೆಟ್ರೋಫೋಲ್ ವೃತ್ತದಿಂದ ಕಛೇರಿಯವರೆಗಿನ ರಸ್ತೆಯಲ್ಲಿ ರಾರಾಜಿಸುತ್ತಿದೆ. ಸ್ವಚ್ಛ ಭಾರತ ಎಂದು ಬೊಬ್ಬಿರಿಯುವ ಬಿಜೆಪಿಗರು ನಗರದ ಅಂದವನ್ನು ಜಾಹೀರಾತು ಫಲಕ ಅಳವಡಿಸುವ ಮೂಲಕ ಕೆಡಿಸ ಹೊರಟಿದ್ದಾರೆ. ಜಾಹೀರಾತು ಫಲಕ ಮುಕ್ತ ನಗರ ಮಾಡ ಹೊರಟಿರುವ ಪಾಲಿಕೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆಯೇ ಎಂಬ ಪ್ರಶ್ನೆ  ಇದೀಗ ಸಾರ್ವಜನಿಕ ವಲಯದಲ್ಲಿ ಎದ್ದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: