ಮನರಂಜನೆ

ಬಿಗ್ ರಿಯಾಲಿಟಿ ಶೋ  ‘ಬಿಗ್‌ಬಾಸ್’ ಕನ್ನಡ ಸೀಸನ್ 7′ ಅಕ್ಟೋಬರ್ ನಲ್ಲಿ ಪ್ರಾರಂಭ : ನಟ ಕಿಚ್ಚ ಸುದೀಪರದ್ದೇ ನಿರೂಪಣೆ

ರಾಜ್ಯ(ಬೆಂಗಳೂರು)ಸೆ.11:-  ಕಿರುತೆರೆ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಬಿಗ್ ರಿಯಾಲಿಟಿ ಶೋ  ‘ಬಿಗ್‌ಬಾಸ್’ ಕನ್ನಡ ಸೀಸನ್ 7′ ಅಕ್ಟೋಬರ್ ತಿಂಗಳಲ್ಲಿಯೇ ಪ್ರಾರಂಭವಾಗಲಿದೆ. ಈ ಬಾರಿಯೂ ಕೂಡ ನಟ ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆ ಜವಾಬ್ದಾರಿ ಹೊರಲಿದ್ದಾರೆ.

ಸಲ್ಮಾನ್ ಖಾನ್ ನೇತೃತ್ವದಲ್ಲಿ ಹಿಂದಿಯಲ್ಲಿ, ಕಮಲ್ ಹಾಸನ್ ನೇತೃತ್ವದಲ್ಲಿ ತಮಿಳಿನಲ್ಲಿ, ಜ್ಯೂನಿಯರ್ ಎನ್‌ಟಿಆರ್, ನಾನಿ ನೇತೃತ್ವದಲ್ಲಿ ತೆಲುಗಿನಲ್ಲಿ ತೆರೆ ಕಂಡ ಬಿಗ್ ಬಾಸ್ ಶೋಗಳು ಪ್ರೇಕ್ಷಕರ ಗಮನ ಸೆಳೆದಿದ್ದು, ಕನ್ನಡದಲ್ಲಿ ಕಿಚ್ಚ ಸುದೀಪ್ ನೇತೃತ್ವದ ‘ಬಿಗ್‌ಬಾಸ್’ ಕೂಡ ಇದರಿಂದ ಹೊರತಾಗೇನಿಲ್ಲ.

ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋನ  6 ಸರಣಿ ಯಶಸ್ವಿಯಾಗಿ ಮುಗಿದಿದ್ದು, ಕಲರ್ಸ್ ಸೂಪರ್ ನಲ್ಲಿ ಬರುತ್ತಿದ್ದ ಬಿಗ್ ಬಾಸ್ ಈ ಬಾರಿ  ಕಲರ್ಸ್ ಕನ್ನಡ ವಾಹಿನಿಯಲ್ಲಿ ಬರಲಿದೆ. ಕಳೆದ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಕೂಡ ‘ಬಿಗ್‌ಬಾಸ್’ ಮನೆ ಪ್ರವೇಶಿಸಿದ್ದರು. ಜನಸಾಮಾನ್ಯರು ಮತ್ತು ಸೆಲೆಬ್ರಿಟಿಗಳ ಎಪಿಸೋಡ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಬಾರಿ ಸೆಲೆಬ್ರಿಟಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎನ್ನಲಾಗಿದೆ.

ಸಿನಿಮಾ, ಕಿರುತೆರೆ, ರಾಜಕೀಯ ಕ್ಷೇತ್ರದಿಂದ ಬಂದ ವ್ಯಕ್ತಿಗಳ ಬದುಕಿನ ಕುರಿತು ತಿಳಿದುಕೊಳ್ಳಲು ವೀಕ್ಷಕರು ಹೆಚ್ಚು ಆಸಕ್ತಿ ಹೊಂದಿರುತ್ತಿದ್ದು,  ಹಾಗಾಗಿ ಕೇವಲ ಸೆಲೆಬ್ರಿಟಿಗಳೇ ಪರಸ್ಪರ ಪೈಪೋಟಿ ನಡೆಸಿದರೆ ಒಳ್ಳೆಯದು ಎಂಬ ಅಭಿಪ್ರಾಯಕ್ಕೆ ವಾಹಿನಿ ಬಂದಿದೆ ಎನ್ನಲಾಗಿದೆ. ಅಂತಿಮವಾಗಿ ಆಯ್ಕೆಯಾಗುವ 15 ಮಂದಿ ಸೆಲೆಬ್ರಿಟಿಗಳು ಯಾರು ಎಂಬ ವೀಕ್ಷಕರ ಪ್ರಶ್ನೆಗೆ ಉತ್ತರವಿನ್ನೂ ಹೊರಬಿದ್ದಿಲ್ಲ.

7ನೇ ಸೀಸನ್‌ನಲ್ಲಿಯೂ ಕೂಡ ನಟ ಕಿಚ್ಚ ಸುದೀಪ್ ನಿರೂಪಣೆ ಜವಾಬ್ದಾರಿ ಹೊತ್ತಿದ್ದು,  ಸೆಪ್ಟೆಂಬರ್ 13ರಂದು ವಾಹಿನಿಯಲ್ಲಿ ಪ್ರೋಮೋ ಬಿತ್ತರವಾಗಲಿದೆ. ಅಕ್ಟೋಬರ್ 20ರಂದು ‘ಬಿಗ್ ಬಾಸ್ ಕನ್ನಡ ಸೀಸನ್ 7’ ಪ್ರಸಾರವಾಗಲಿದೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: