ಕ್ರೀಡೆ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುತ್ತಿಲ್ಲ ಹೈಜಂಪ್ ಆಟಗಾರ ತೇಜಸ್ವಿನ್ ಶಂಕರ್

ದೇಶ(ನವದೆಹಲಿ)ಸೆ.11:- ಹೈಜಂಪ್ ಆಟಗಾರ ತೇಜಸ್ವಿನ್ ಶಂಕರ್ ಈ ತಿಂಗಳ ಕೊನೆಯಲ್ಲಿ ದೋಹಾದಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ. ಈ ಮಾಹಿತಿಯನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್‌ಐ) ಗೆ ಶಂಕರ್ ನೀಡಿದ್ದಾರೆ.

ಚಾಂಪಿಯನ್‌ ಶಿಪ್‌ನಲ್ಲಿ ತೇಜಸ್ವಿನ್  ಶಂಕರ್ ಭಾಗವಹಿಸುತ್ತಿಲ್ಲವೆಂದು ಎಎಫ್‌ಐ ಮಂಗಳವಾರ ಹೇಳಿಕೆ ನೀಡಿದೆ. ವಿಶ್ವ ಚಾಂಪಿಯನ್‌ಶಿಪ್ ಸೆಪ್ಟೆಂಬರ್ 27 ರಂದು ಕತಾರ್‌ನ ರಾಜಧಾನಿ ದೋಹಾದಲ್ಲಿ ಪ್ರಾರಂಭವಾಗಲಿದೆ.

ಯುಎಸ್ ನಲ್ಲಿ ವಾಸಿಸುವ ತೇಜಸ್ವಿನ್ ಶಂಕರ್ ಅವರು ತಮ್ಮ ಲಯದಲ್ಲಿಲ್ಲ ಮತ್ತು ಸರಿಯಾಗಿ ಪ್ರದರ್ಶನ ನೀಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಅವರು ವಿಶ್ವ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುವುದಿಲ್ಲ” ಎಂದು ಎಎಫ್‌ಐ ಹೇಳಿಕೆ ನೀಡಿದೆ.

ಎಎಫ್‌ಐ ಅಧ್ಯಕ್ಷ ಅಡಿಲೆ ಜೆ. ಸುಮರಿವಾಲಾ, “ಅವರು ದೋಹಾದಲ್ಲಿ ಭಾಗವಹಿಸಿ ಹೆಚ್ಚಿನ ಅನುಭವವನ್ನು ಪಡೆಯಬೇಕೆಂದು ನಾವು ಬಯಸಿದ್ದೆವು, ಆದರೆ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಮುಂದಿನ ವರ್ಷ ಟೋಕಿಯೊದಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅವರು ಉತ್ತಮ ತರಬೇತಿ ಪಡೆದು ಪಾಲ್ಗೊಳ್ಳುತ್ತಾರೆ. ಗಾಯದಿಂದ ಮುಕ್ತರಾಗುತ್ತಾರೆ. ಭಾರತೀಯ ತಂಡದ ಭಾಗವಾಗಿ ಭಾಗವಹಿಸುತ್ತಾರೆಂದು ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: