ಕ್ರೀಡೆ

ಬಾಕ್ಸಿಂಗ್ ವಿಶ್ವ ಚಾಂಪಿಯನ್‌ ಶಿಪ್: ಗೆಲುವಿನೊಂದಿಗೆ ಪ್ರಾರಂಭಿಸಿದ ಭಾರತದ ಬ್ರಿಜೇಶ್

ದೇಶ(ನವದೆಹಲಿ)ಸೆ.11:- ಇಂಡಿಯಾ ಓಪನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಬ್ರಿಜೇಶ್ ಯಾದವ್ (81 ಕೆಜಿ) ಎಐಬಿಎ ಪುರುಷರ  ಬಾಕ್ಸಿಂಗ್ ವಿಶ್ವ ಚಾಂಪಿಯನ್‌ ಶಿಪ್ ನಲ್ಲಿ ಉತ್ತಮ ಗೆಲುವಿನೊಂದಿಗೆ ಪ್ರಾರಂಭಿಸಿದರು. ನಿಧಾನಗತಿಯ ಆರಂಭದ ಹೊರತಾಗಿಯೂ, ಯಾದವ್ ಮೊದಲ ಸುತ್ತಿನಲ್ಲಿ ಪೋಲೆಂಡ್‌ನ ಮಾಲೆಯುಜ್ ಗೋಯಿ ಸ್ಕೀ ಅವರನ್ನು 5–0ರಿಂದ ಸೋಲಿಸಿದರು.

ವಿಜಯದ ನಂತರ, ಬ್ರಿಜೇಶ್, “ನಾನು ಸ್ವಲ್ಪ ನಿಧಾನವಾಗಿದ್ದೆ ಆದರೆ ಎರಡನೇ ಸುತ್ತಿಗೆ ಬರುವ ಹೊತ್ತಿಗೆ ನಾನು ಲಯವನ್ನು ಪಡೆದುಕೊಂಡು ಗೆದ್ದೆ. ಈಗ ನಾನು ಎರಡನೇ ಸುತ್ತಿಗೆ ಕಾಯುತ್ತಿದ್ದೇನೆ ಎಂದಿದ್ದಾರೆ.

ಜುಲೈನಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಥೈಲ್ಯಾಂಡ್ ಓಪನ್‌ನಲ್ಲಿ ಬ್ರಿಜೇಶ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈಗ ಎರಡನೇ ಸುತ್ತಿನಲ್ಲಿ ಅವರು ತುರ್ಕಿಯ ಬೇರಾಮ್ ಮಲ್ಕನ್ ಅವರನ್ನು ಎದುರಿಸಲಿದ್ದಾರೆ. ಬ್ರಿಜೇಶ್ ಎರಡನೇ ದಿನ ಹೋರಾಡಿದ್ದಾರೆ, ಮೂರನೇ ದಿನ ಭಾರತದಿಂದ ಯಾವುದೇ ಬಾಕ್ಸರ್ ಗಳು ಅಖಾಡಕ್ಕೆ ಇಳಿಯುತ್ತಿಲ್ಲ. ಮಾಜಿ ಭಾರತ ಓಪನ್ ಚಾಂಪಿಯನ್ ಮನೀಶ್ ಕೌಶಿಕ್ (63 ಕೆಜಿ) ಗುರುವಾರ ಅಖಾಡಕ್ಕೆ ಇಳಿಯಲಿದ್ದಾರೆ. ಅವರು  ಕಿರ್ಗಿಸ್ತಾನ್‌ನ ಕಾದೆರ್ ಬೇಕ್  ಉಲುಲೂ ಅವರೊಂದಿಗೆ ಸೆಣಸಲಿದ್ದಾರೆ.

ಅಮಿತ್ ಪಂಗಲ್ (52 ಕೆಜಿ), ಕವಿಂದರ್ ಸಿಂಗ್ ಬಿಶ್ತ್ (57 ಕೆಜಿ) ಮತ್ತು ಆಶಿಶ್ ಕುಮಾರ್ (75 ಕೆಜಿ) ಶ್ರೇಯಾಂಕ ಪಡೆದರು. ಮೊದಲ ಸುತ್ತಿನಲ್ಲಿ ಒಟ್ಟು ನಾಲ್ಕು ಬಾಕ್ಸರ್ ಗಳಿಗೆ  ಬೈ ಸಿಕ್ಕಿದೆ. ಹ್ಯಾಂಬರ್ಗ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನ ಕೊನೆಯ ಆವೃತ್ತಿಯಲ್ಲಿ ಗೌರವ್ ವಿಧೂರಿ ಭಾರತದ ಪರವಾಗಿ ಏಕೈಕ ಪದಕವನ್ನು ಗೆದ್ದರು. ಈ ಬಾರಿ ಭಾರತ ತನ್ನ ಪದಕಗಳ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತದೆ. ಈ ಚಾಂಪಿಯನ್‌ಶಿಪ್‌ನಲ್ಲಿ 89 ದೇಶಗಳ ಒಟ್ಟು 488 ಬಾಕ್ಸರ್‌ಗಳು ಭಾಗವಹಿಸುತ್ತಿದ್ದಾರೆ. (ಎಸ್.ಎಚ್)

Leave a Reply

comments

Related Articles

error: