
ಪ್ರಮುಖ ಸುದ್ದಿ
‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ದೇಶ(ಮಥುರಾ),ಸೆ.12:- ಉತ್ತರಪ್ರದೇಶದ ಮಥುರಾದಲ್ಲಿ ‘ಸ್ವಚ್ಛತಾ ಹಿ ಸೇವಾ’ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು ನದಿ, ಕೆರೆ, ಸರೋವರಗಳಲ್ಲಿರುವ ಜೀವಿಗಳು ಪ್ಲಾಸ್ಟಿಕ್ ಸೇವನೆ ಮಾಡಿದರೆ ಬದುಕುಳಿಯುವ ಸಾಧ್ಯತೆ ಕಡಿಮೆ. ಹೀಗಾಗಿ ಅ. 2ರಿಂದ ಮನೆ, ಕಚೇರಿಗಳನ್ನು ಮರುಬಳಕೆಯಾಗದ ಪ್ಲಾಸ್ಟಿಕ್ನಿಂದ ಮುಕ್ತಗೊಳಿಸ ಬೇಕೆಂದರು. ಮಥುರಾದಲ್ಲಿ ಕಸ ಆಯುವ ಮಹಿಳೆಯರನ್ನು ಭೇಟಿ ಮಾಡಿದರು. ಅವರ ಜೊತೆ ತಾವೂ ಕುಳಿತು ಪ್ಲಾಸ್ಟಿಕ್ ನ್ನು ಬೇರೆಯಾಗಿಯೇ ತೆಗೆದಿರಿಸಿದರು. 1000 ಕೋಟಿ ರೂ. ಮೊತ್ತದ ವಿವಿಧ ಯೋಜನೆಗಳ ಶಿಲಾನ್ಯಾಸ ನೆರವೇರಿಸಿದರು.
ಭಾರತದಲ್ಲಿ ಶ್ರೀಕೃಷ್ಣನಂತಹ ಪ್ರೇರಣಾ ಶಕ್ತಿಯಿದೆ. ಗೋವು, ಹಾಲು, ಮೊಸರು, ಬೆಣ್ಣೆ ಇಲ್ಲದೆ ಗೋಪಾಲನನ್ನು ನೆನೆಯುವುದಕ್ಕೂ ಸಾಧ್ಯವಿಲ್ಲ. ನಮ್ಮ ಗ್ರಾಮೀಣ ಭಾಗದ ಅರ್ಥ ವ್ಯವಸ್ಥೆ ಗೋವನ್ನೂ ಅವಲಂಬಿಸಿದೆ. ಆದರೆ ಕೆಲವರಿಗೆ ಗೋವು, ಓಂ ಎನ್ನುವ ಶಬ್ದಗಳನ್ನು ಕೇಳಿದರೆ ರೋಮ ನಿಮಿರುತ್ತದೆ ಎಂದು ಕಾಂಗ್ರೆಸ್ನ ಕೆಲ ನಾಯಕರನ್ನು ಕುಟುಕಿದರು.
ಇಂದು ಜಾರ್ಖಂಡಕ್ಕೆ ತೆರಳಲಿರುವ ಮೋದಿ ಅಲ್ಲಿ ಪ್ರಧಾನ ಮಂತ್ರಿ ಕಿಸಾನ್ ಮಾನ್ಧನ್ ಯೋಜನೆಗೆ ಚಾಲನೆ ನೀಡಲಿದ್ದಾರೆ. ಪ್ರಧಾನಮಂತ್ರಿ ವ್ಯಾಪಾರಿ ಮಾನ್ಧನ್ ಯೋಜನೆ ಮತ್ತು ಸ್ವ ರೋಜ್ಗಾರ್ ಯೋಜನೆಗೂ ಹಸಿರು ನಿಶಾನೆ ತೋರಲಿದ್ದಾರೆ. ಜಾರ್ಖಂಡ ವಿಧಾನಸಭೆಯ ನೂತನ ಕಟ್ಟಡವನ್ನು ಅವರು ಉದ್ಘಾಟಿಸಲಿದ್ದಾರೆ. (ಎಸ್.ಎಚ್)