ಮೈಸೂರು

ಇಬ್ಬರು ದ್ವಿ ಚಕ್ರ ವಾಹನ ಕಳ್ಳರ ಬಂಧನ : 21,45,000 ಮೌಲ್ಯದ 11 ಐಷಾರಾಮಿ ಬೈಕ್‍, 01 ಮೊಬೈಲ್ ಫೋನ್ ವಶ

ಮೈಸೂರು,ಸೆ.12:- ಮೈಸೂರು ನಗರ ವಿಜಯನಗರ ಪೊಲೀಸರು ಮಾಹಿತಿ ಮೇರೆಗೆ 07/09/2019 ರಂದು ವಿಜಯನಗರ ಪೊಲೀಸ್ ಠಾಣಾ ಸರಹದ್ದಿನ ಹುಣಸೂರು ಮುಖ್ಯರಸ್ತೆಯ ಹಿನಕಲ್ ಸಿಗ್ನಲ್‍ನ ಬಳಿ ಕಾರ್ಯಾಚರಣೆ ನಡೆಸಿ, ನಂಬರ್ ಪ್ಲೇಟ್ ಇಲ್ಲದ ಬೈಕನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದ ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಸ್ಟ್ಯಾನ್ಲಿ ಎ @ ಸಾನು ಬಿನ್ ಆಂಥೋನಿ @ ಜಾನ್, (24), ಹಿನಕಲ್ ಮೈಸೂರು, ಧನುಶ್ ಕೆ.ಕೆ @ ದರ್ಶನ್ ಬಿನ್ ಜಿ ವಿ ಕೃಷ್ಣಾ, (24), ಮುಳ್ಳುಸೊಗೆ ಗ್ರಾಮ, ಸೋಮವಾರಪೇಟೆ ತಾಲೂಕು, ಕೊಡುಗು ಜಿಲ್ಲೆ ಎಂದು ಗುರುತಿಸಲಾಗಿದ್ದು, ಇವರನ್ನು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ ಆರೋಪಿಗಳು 2018ನೇ ಇಸವಿಯಿಂದಲೂ ಮೈಸೂರು ನಗರದ ವಿಜಯನಗರ, ಹೆಬ್ಬಾಳ್, ಸರಸ್ವತಿಪುರಂ, ಕುಶಾಲನಗರ, ಜಯಲಕ್ಷ್ಮೀಪುರಂ ಠಾಣಾ ವ್ಯಾಪ್ತಿಗಳಲ್ಲಿ 11 ದ್ವಿ ಚಕ್ರ ವಾಹನಗಳನ್ನು ಕಳ್ಳತನ ಮಾಡಿ ವಿವಿಧೆಡೆ ಮಾರಾಟ ಮಾಡಿದ್ದು, ಜಯಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವರ ವ್ಯಾನಿಟಿ ಬ್ಯಾಗ್ ನಲ್ಲಿದ್ದ  ಮೊಬೈಲ್ ಸಮೇತ ವ್ಯಾನಿಟಿ ಬ್ಯಾಗನ್ನು ಕಿತ್ತುಕೊಂಡು ಹೋಗಿರುವುದಾಗಿ ತಿಳಿಸಿದ್ದರ ಮೇರೆಗೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನಂತರ ಪೊಲೀಸ್ ಕಸ್ಟಡಿಗೆ ಪಡೆದು ಆರೋಪಿಗಳಿಂದ ಒಟ್ಟು   21,45,000ರೂ. ಮೌಲ್ಯದ ಒಟ್ಟು 11 ಐಷಾರಾಮಿ ದ್ವಿ ಚಕ್ರ ವಾಹನಗಳು (ಯಮಹಾ ಆರ್15-1, ಅಪಾಚೆ-03, ಬಜಾಜ್ ಪಲ್ಸರ್-05, ಕೆ.ಟಿ.ಎಂ.ಡ್ಯೂಕ್-02) ಹಾಗೂ ಒಂದು  ಆ್ಯಪಲ್ ಐಫೋನನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ)ರವರಾದ   ಬಿ.ಟಿ. ಕವಿತಾ  ಮತ್ತು ನರಸಿಂಹರಾಜ ವಿಭಾಗದ ಎ.ಸಿ.ಪಿ. ಸಿ. ಗೋಪಾಲ್‍ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಸುರೇಶ್‍ಕುಮಾರ್.ಎಸ್.ಡಿ., ಎಎಸ್‍ಐ ಜಯಪ್ಪ.ಟಿ. ಸಿಬ್ಬಂದಿಗಳಾದ ಶಂಕರ್, ಈಶ್ವರ್, ಎಂ. ಅಶ್ವತ್ಥಕುಮಾರ್, ಮುರಳೀಧರ, ಉಮೇಶ್, ಮಹದೇವ, ತಿಲಕ್‍ಕುಮಾರ್, ಅಣ್ಣಪ್ಪ, ಹರೀಶ್, ಶ್ರೀನಿವಾಸ, ತಾಂತ್ರಿಕ ವಿಭಾಗ ಪೊಲೀಸ್ ಇನ್ಸಪೆಕ್ಟರ್ ಆಶೋಕ್‍ ಕುಮಾರ್  ಸಿಬ್ಬಂದಿಗಳಾದ ಕುಮಾರ್ ಮತ್ತು ಗುರುದೇವಾರಾಧ್ಯ  ಮಾಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: