ಮನರಂಜನೆ

`ಪೈಲ್ವಾನ್’ ಗೆ ಶುಭಕೋರಿದ ಸ್ಯಾಂಡಲ್ ವುಡ್

ಬೆಂಗಳೂರು,ಸೆ.12-ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ಇಂದು ತೆರೆಗೆ ಅಪ್ಪಳಿಸಿದೆ. ಚಿತ್ರಕ್ಕೆ ಭರ್ಜರಿ ಓಪನಿಂಗ್ ಸಿಕ್ಕಿದ್ದು, ಎಲ್ಲ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.

ಅಭಿನಯ ಚಕ್ರವರ್ತಿಯ ನಟನೆಗೆ ಎಲ್ಲರೂ ಜೈ ಎಂದಿದ್ದಾರೆ. ಅಲ್ಲದೆ, ಸುದೀಪ್ ಅಭಿಮಾನಿಗಳಿಗೆ ಸಿನಿಮಾ ಇಷ್ಟವಾಗಿದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 4000 ಸ್ಕ್ರೀನ್‌ಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಇದು ಕೆಜಿಎಫ್ ಸಿನಿಮಾ ನಂತರದಲ್ಲಿ ಸ್ಯಾಂಡಲ್‌ವುಡ್ ಲೋಕದಲ್ಲಿ ದೊಡ್ಡ ದಾಖಲೆ.

‘ಪೈಲ್ವಾನ್’ ತಂಡಕ್ಕೆ, ಅಭಿನಯ ಚಕ್ರವರ್ತಿ ಸುದೀಪ್ ಗೆ ಅಭಿಮಾನಿಗಳು ಮಾತ್ರವಲ್ಲದೆ ಸ್ಯಾಂಡಲ್ ವುಡ್ ಶುಭ ಕೋರಿದೆ. ನಿರ್ದೇಶಕರಾದ ಸುನೀಲ್ ಕುಮಾರ್ ದೇಸಾಯಿ, ರವಿ ವರ್ಮಾ, ಜೋಗಿ ಪ್ರೇಮ್, ಸಿಂಪಲ್ ಸುನಿ, ಪವನ್ ಒಡೆಯರ್, ನಟರಾದ ಜಗ್ಗೇಶ್, ಪುನೀತ್ ರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ರಿಷಬ್ ಶೆಟ್ಟಿ, ದುನಿಯಾ ವಿಜಿ, ಅನೂಪ್ ಭಂಡಾರಿ, ನಟಿ ನಭಾ ನಟೇಶ್, ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಸಾಹಿತಿ ತೆಲುಗಿನ ರಾಮಜೋಗಯ್ಯ ಶಾಸ್ತ್ರಿ ಸೇರಿದಂತೆ ಅನೇಕರು ಚಿತ್ರ ಅದ್ಭುತ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ.

 

ನವರಸ ನಾಯಕ ಜಗ್ಗೇಶ್, ಕನ್ನಡಿಗರ ಹೃದಯ ಗೆಲ್ಲಲಿ #ಪೈಲ್ವಾನ್.. ಬನ್ನೊರಲ್ಲಿ # ತೋತಾಪುರಿ ಚಿತ್ರೀಕರಣ.. ದಾರಿಯಲ್ಲಿ ಚಿತ್ರಮಂದಿರದ ಮುಂದೆ ಹಾದು ಹೋಗುವಾಗ ಖುಷಿಯಾಯಿತು ಜನರ ಪ್ರೀತಿ ಕಂಡು.. ಶುಭಮಸ್ತು ಎಂದು ಟ್ವಿಟ್ ಮಾಡಿದ್ದಾರೆ.

 

ನಿರ್ದೇಶಕ ಪ್ರೇಮ್, ಚಿತ್ರವು ಉನ್ನತ ಯಶಸ್ಸು ಕಾಣಲಿ ಹಾಗೂ ನಮ್ಮ ಕನ್ನಡ ಚಿತ್ರರಂಗ ಮತ್ತೊಂದು ಹಂತಕ್ಕೆ ತಲುಪಲಿ ಎಂದು ಹಾರೈಸಿ ಟ್ವಿಟ್ ಮಾಡಿದ್ದಾರೆ.

ಸಿಂಪಲ್ ಸುನಿ, ಕನ್ನಡಕ್ಕೆ ಮತ್ತೊಂದು ಗರಿ ತೊಡಿಸುವಂತಹ ಚಿತ್ರ… ಇಡೀ ಭಾರತದಾದ್ಯಂತ ಬೇರೆ ಬೇರೆ ಭಾಷೆಗಳಲ್ಲಿ ಪೈಲ್ವಾನ್ ಬಿಡುಗಡೆ.. ಇನ್ನು ಪೈಲ್ವಾನ್ ಬಂದಾಯಿತು.. ನೀವು ನೋಡಿ ಹರಸಿ ಹಬ್ಬ ಮಾಡೋದೊಂದೆ ಬಾಕಿ.. ಶುಭವಾಗಲಿ ಎಂದು ಟ್ವಿಟ್ ಮಾಡಿದ್ದಾರೆ.

`ಪೈಲ್ವಾನ್’ ಸಿನೆಮಾಕ್ಕೆ ತೆಲುಗಿನ ರಾಮಜೋಗಯ್ಯ ಶಾಸ್ತ್ರಿ ಹಾಡು ಬರೆದಿದ್ದಾರೆ. ಇದು ಸುದೀಪ್ ಗೆ ತುಂಬ ಇಷ್ಟವಾಯಿತಂತೆ. ಹೀಗಾಗಿ ಇದನ್ನು ನೋಡಿದ ಮೇಲೆ ಕನ್ನಡದವರು ನಾವು ಇನ್ನೂ ಇಂಪ್ರೂವ್ ಮಾಡಿಕೊಳ್ಳಬೇಕು ಎಂದೆನಿಸಿತಂತೆ. ಈ ಸಂದರ್ಭದಲ್ಲಿ ಕಿಚ್ಚ ನಾಗೇಂದ್ರಪ್ರಸಾದ್ ಅವರ ಸಾಹಿತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾದಲ್ಲಿ ಸುದೀಪ್ ಗೆ ಜೋಡಿಯಾಗಿ ಬಾಲಿವುಡ್ ನಟಿ ಆಕಾಂಕ್ಷ ಸಿಂಗ್ ಅಭಿನಯಿಸಿದ್ದಾರೆ. ನಟ ಸುನೀಲ್ ಶೆಟ್ಟಿ ಸುದೀಪ್ ಗೆ ಮೆಂಟರ್ ಆಗಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ. (ಎಂ.ಎನ್)

 

 

Leave a Reply

comments

Related Articles

error: