ಮೈಸೂರು

ಪ್ರಸ್ತುತ ಓದುವ ಕಲೆ ಕಡಿಮೆಯಾಗಿ ನೋಡುವ ಕಲೆ ಹೆಚ್ಚಾಗುತ್ತಿದೆ : ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ

ಪ್ರಥಮ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಮೈಸೂರು,ಸೆ.12:- ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕಾರ್ಯಕ್ರಮ ಪ್ರಥಮ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಚಲನಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ  ಉದ್ಘಾಟಿಸಿದರು.

ಇಂದು ನಗರದ ಕಲಾಮಂದಿರದಲ್ಲಿ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿ ಎಂ.ಎಸ್.ಅರ್ಜುನ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮವನ್ನು ನಿರ್ದೇಶಕ ಟಿ.ಎಸ್ ನಾಗಾಭರಣ ಉದ್ಘಾಟನೆ ಮಾಡಿದರು. ಇದೇ ವೇಳೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ “ಮುಂಜಾವು” ಕೃತಿ ಬಿಡುಗಡೆ ಮಾಡಿದರು.

ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳಾನಾದ್ಯಕ್ಷ ಎಂ ಎಸ್ ಅರ್ಜುನ್ ಸಂಭ್ರಮದ ಮೆರವಣಿಗೆಯಲ್ಲಿ ಹೊರಟರು. ನಗರದ ಸ್ವಾತಂತ್ರ್ಯ ಹೋರಾಟಗಾರ ಉದ್ಯಾನವನದಿಂದ ಕಲಾಮಂದಿರದವರೆಗೆ ಮೆರವಣಿಗೆ ಸಾಗಿತು.

ಪ್ರಥಮ ಮೈಸೂರು ಜಿಲ್ಲಾ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಟಿ.ಎಸ್ ನಾಗಾಭರಣ ಮಾತನಾಡಿ  ಇತ್ತೀಚೆಗೆ ವಿದ್ಯಾರ್ಥಿಗಳು ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಾರೆ. ಆದರೆ ಮೊಬೈಲ್ ಜೊತೆ ಒಂದು ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಿಮ್ಮ ಮನಸ್ಸನ್ನು ಸದಾ ಕಾಲ ಜಾಗೃತಿ ಮಾಡುವ ಪ್ರವೃತ್ತಿ ಬೇಕಾಗುತ್ತದೆ. ಸಂಪನ್ಮೂಲಯುಕ್ತ  ಜೀವನ ಸಾಗಿಸಲು ಪ್ರಕೃತಿಯ ಜೊತೆಯಲ್ಲಿ ಸಂಭಾವ್ಯ ಜೀವನ ಮಾಡಬೇಕು. ಅಂತಹ ಸಂಭಾವ್ಯ ಜೀವನ ಕಲೆ ನಾಟಕದಿಂದ ಸಿಗುತ್ತದೆ. ಪ್ರಸ್ತುತ ಓದುವ ಕಲೆ ಕಡಿಮೆಯಾಗಿ ನೋಡುವ ಕಲೆ ಹೆಚ್ಚಾಗುತ್ತಿದೆ.  ಮಕ್ಜಳು ಓದುವ ಕ್ರಮ ಬೇರೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ಹಾಗೆಯೇ ಸಾಹಿತ್ಯದ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿಯನ್ನ ಬೆಳೆಸಿಕೊಳ್ಳಬೇಕು. ಇಂತಹ ಸಮ್ಮೇಳನ ಮಕ್ಕಳಲ್ಲಿ  ಮೌಲ್ಯವನ್ನು ಹೆಚ್ಚಿಸುತ್ತದೆ ಎಂದು ಟಿ.ಎಸ್.ನಾಗಾಭರಣ ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಗಣಪತಿ ಸಚಿದಾನಂದ ಆಶ್ರಮದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಮೇಯರ್ ಪುಷ್ಪಲತಾ ಜಗನ್ನಾಥ್, ಬಾಲ ನಟ ಮಹೇಂದ್ರ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ್, ಸೇರಿದಂತೆ ಹಲವರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: