ಪ್ರಮುಖ ಸುದ್ದಿಮೈಸೂರು

ಶಿಕಾರಿಪುರ ಚಿತ್ರ : ದಿ.15ರಂದು ನಟ-ನಟಿಯರ ಸಂದರ್ಶನ

ಮೈಸೂರು,ಸೆ.12 : ಆನಂದ ಕಿರಣ ಪ್ರೋಡಕ್ಷನ್  ವತಿಯಿಂದ ನಿರ್ಮಿಸಲಾಗುತ್ತಿರುವ ‘ಶಿಕಾರಿಪುರ’ ಚಿತ್ರಕ್ಕೆ ನಟ ನಟಿಯರ ಸಂದರ್ಶನ ಏರ್ಪಡಿಸಲಾಗಿದ್ದು, ಆರ್ಹ ಆಸಕ್ತರು ಪಾಲ್ಗೊಳ್ಳಬಹುದೆಂದು ನಿರ್ಮಾಪಕ ಮೈಲಾರಿ ಕೃಷ್ಣ ತಿಳಿಸಿದರು.

ದಿ.15ರ ಬೆಳಗ್ಗೆ 10 ರಿಂದ ವಿವೇಕಾನಂದ ನಗರದ ಕಲಾಧಾರೆ ಕಲ್ಚರಲ್ ಟ್ರಸ್ಟ್ ನ ಮಾಸ್ಟರ್ & ಬ್ಲಾಸ್ಟರ್ ಡ್ಯಾನ್ಸ್ ಗ್ರೂಪ್ ನಲ್ಲಿ   ಈ ಸಂದರ್ಶನ ನಡೆಸಲಾಗುತ್ತಿದೆ, ಆಸಕ್ತರು ತಮ್ಮ ಇತ್ತೀಚಿನ ಎರಡು ಭಾವಚಿತ್ರ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಸಂದರ್ಶನಕ್ಕೆ ಹಾಜರಾಗಬಹುದಾಗಿದ್ದು, ಯಾವುದೇ ವಯೋಮಿತಿ ಇರುವುದಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಬ್ಬನಹಳ್ಳಿ ಶಶಿಧರ 9844110884, ಮೈಲಾರಿ ಕೃಷ್ಣ 8217790172 ಅನ್ನು ಸಂಪರ್ಕಿಸಬಹುದಾಗಿದೆ ಎಂದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: