ಮೈಸೂರು

ಕಾರುಗಳ ಚಾಲಕರು ಮಾಲಿಕರ ಸಮಸ್ಯೆ ಬಗೆಹರಿಸಲು ಒತ್ತಾಯ : ಪ್ರತಿಭಟನೆ

ಮೈಸೂರು ಮಹಾನಗರಪಾಲಿಕೆಯಲ್ಲಿ ಮಾಸಿಕ ಬಾಡಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರುಗಳ ಮಾಲೀಕರು ಮತ್ತು ಚಾಲಕರ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ಸರ್ಕಾರ ಮತ್ತು ಅರೆ ಸರ್ಕಾರ ಕಚೇರಿಗಳ ಗುತ್ತಿಗೆ ವಾಹನಗಳ ಮಾಲಿಕರು ಹಾಗೂ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಮೈಸೂರು ಮಹಾನಗರಪಾಲಿಕೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಮೈಸೂರು ಮಹಾನಗರಪಾಲಿಕೆ ಉಪಯೋಗಕ್ಕಾಗಿ ಅವಶ್ಯವಿರುವ ಕಾರು ವಾಹನಗಳನ್ನು ಮೂರು ಪ್ಯಾಕೇಜ್ ಗಳಲ್ಲಿ ಮಾಸಿಕ ಬಾಡಿಗೆ ಆಧಾರದ ಮೇಲೆ ಪಡೆಯಲು ಟೆಂಡರ್ ಕರೆಯಲಾಗಿತ್ತು. ಟೆಂಡರ್ ನಲ್ಲಿ ನಮ್ಮ ಸಂಘವನ್ನು ಹೊರತುಪಡಿಸಿ ಬೇರ್ಯಾವ ಸಂಸ್ಥೆಯು ಭಾಗವಹಿಸಿರುವುದಿಲ್ಲ. ಟೆಂಡರ್ ನಲ್ಲಿ ಭಾಗವಹಿಸಿದ ನಮ್ಮ ತಂಡವು ಬಿಡ್ ಸಲ್ಲಿಸಿತ್ತು. ನಾವು ಸಲ್ಲಿಸಿರುವ ದಾಖಲಾತಿಗಳನ್ನು ಮರೆಮಾಚಿ ಮೇಲಾಧಿಕಾರಿಗಳಿಗೆ ಸುಳ್ಳುವರದಿ ನೀಡಿ  ನಮ್ಮ ಸಂಘಕ್ಕೆ ಲಭಿಸಬೇಕಾದ ಟೆಂಡರ್ ನ್ನು ರದ್ದುಗೊಳಿಸಿಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕರ್ತವ್ಯಲೋಪವೆಸಗಿ ನಮ್ಮ ಸಂಘದ ಸದಸ್ಯರ ಹಿತಕ್ಕೆ ತೊಂದರೆ ನೀಡುತ್ತಿರುವ ವಾಹನ ವಿಭಾಗ ಸಹಾಯಕ ಕಾರ್ಯಪಾಲಕ ಅಭಿಯಂತರ ಸುನಿಲ್ ಬಾಬು ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ನಿಗದಿತ ಸಮಯಕ್ಕೆ ಗುತ್ತಿಗೆದಾರರು ಮಾಸಿಕ ಬಾಡಿಗೆಯನ್ನು ನೀಡದೆ ವಾಹನ ಚಾಲಕರು, ಮಾಲಿಕರುಗಳಿಗೆ ತೊಂದರೆ ನೀಡುತ್ತಿದ್ದು, ಪ್ರಶ್ನಿಸಿದರೆ ನಿಮ್ಮ ವಾಹನಗಳನ್ನು ತೆಗೆಯುತ್ತೇವೆಂದು ಬೆದರಿಕೆ ಹಾಕುತ್ತಿರುವ ಕುರಿತು ಪರಿಶೀಲಿಸಿ ಕ್ರಮವಹಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು. ಇದೇ ಸಂದರ್ಭ ಸುನಿಲ್ ಬಾಬು ವಿರುದ್ಧ ಘೋಷಣೆಗಳನ್ನು ಕೂಗಿದರು.

ಇದೇ ಸಂದರ್ಭ ಮೇಯರ್ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರಲ್ಲದೇ ಮನವಿ ಸ್ವೀಕರಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎನ್.ಭಾಸ್ಕರ್, ಉಪಾಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ರಾಮು, ಖಜಾಂಚಿ ನಾಗಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

comments

Related Articles

error: