
ಪ್ರಮುಖ ಸುದ್ದಿಮೈಸೂರು
‘ಚಾಲನ ಪರವಾನಗಿ’ ನೋಂದಾಯಿಸಿಕೊಳ್ಳಿ : ಜಿಲ್ಲಾ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟ ಮನವಿ
ಮೈಸೂರು,ಸೆ.12 : ಚಾಲನಾ ಪರವಾನಗಿಗೆ ವಿದ್ಯಾಭ್ಯಾಸ ಕಡ್ಡಾಯ ಎಂಬ ನಿಯಮ ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಅವರು ನಗರದ ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಚಾಲನಾ ಪರವಾನಗಿ ಮಾಡಿಸಿಕೊಡಲು ಮಂದೆ ಬಂದಿರುವ ಹಿನ್ನೆಲೆಯಲ್ಲಿ ಅಂತಹವರು ಅಗತ್ಯ ದಾಖಲಾತಿ ನೀಡಿ ನೋಂದಾಯಿಸಿಕೊಳ್ಳಬೇಕೆಂದು ನಗರ ಜಿಲ್ಲಾ ದ್ವಿಚಕ್ರ ವಾಹನಗಳ ದುರಸ್ತಿಗಾರರ ಒಕ್ಕೂಟ ಮನವಿ ಮಾಡಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಎನ್. ರವೀಂದ್ರಕುಮಾರ್, ತಾವು ಶಾಸಕ ಎಸ್.ಎ. ರಾಮದಾಸ್ ಅವರನ್ನು ಸಂಪರ್ಕಿಸಿದಾಗ ಅವರು ದ್ವಿಚಕ್ರ ವಾಹನ ದುರಸ್ತಿಗಾರರಿಗೆ ಡಿಎಲ್ ಮಾಡಿಸಿಕೊಡಲು ನೆರವು ನೀಡಲು ಮುಂದೆ ಬಂದಿದ್ದು, ಅಂತಹವರು ವಿಳಾಸ, ಗುರುತಿನ ದಾಖಲೆಗಳನ್ನು ಒಕ್ಕೂಟಕ್ಕೆ ಶೀಘ್ರವೇ ಸಲ್ಲಿಸಿದಲ್ಲಿ ಡಿಎಲ್ ಮಾಡಿಸಿಕೊಳ್ಳಲು ನೆರವಾಗುವುದಾಗಿ ತಿಳಿಸಿದ್ದಾರೆ.
ಜೊತೆಗೆ, ತಮ್ಮದು ಅಸಂಘಟಿತ ಕಾರ್ಮಿಕ ವಲಯವಾಗಿರುವ ಕಾರಣ ಈ ರೀತಿಯವರಿಗೆ ಸಿಗಬೇಕಾದ ಎಲ್ಲ ಸೌಲಭ್ಯ, ನೆರವು ದೊರಕಿಸಿಕೊಡಲು ಸಂಸದ ಪ್ರತಾಪ್ಸಿಂಹ ಮುಂದೆ ಬಂದಿದ್ದು, ಈ ಕಾರಣಕ್ಕಾಗಿಯೂ ಅಂತಹವರು ಒಕ್ಕೂಟದಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪದಾಧಿಕಾರಿಗಳಾದ ಕೆ. ಲಿಂಗರಾಜು, ಮುಜಾಹಿದ್ ಪಾಷಾ, ಚೋಟೇ ಸಾಬ್, ಸಿದ್ದಿಕ್, ಶಾಂತಕುಮಾರ್, ಶ್ರೀನಿವಾಸ್ ಹಾಜರಿದ್ದರು. (ವರದಿ : ಕೆ.ಎಂ.ಆರ್)