ಮೈಸೂರು

ಆರೋಗ್ಯ ತಪಾಸಣಾ ಶಿಬಿರ

ಮೈಸೂರು.ಸೆ.12: ಜೆಎಸ್ಎಸ್ ಆಸ್ಪತ್ರೆ ವತಿಯಿಂದ ಮಾವುತರ, ಕಾವಾಡಿಗಳ ಮತ್ತು ಕುಟುಂಬ ವರ್ಗದವರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

2019ನೇ ನಾಡಹಬ್ಬ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ  ಮಾವುತರಿಗೆ, ಕಾವಾಡಿಗಳ ಮತ್ತು ಕುಟುಂಬದವರಿಗಾಗಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಶಿಬಿರವನ್ನು ಜಿಲ್ಲಾ ಉಸ್ತುವಾರಿಸಚಿವ ವಿ.ಸೋಮಣ್ಣ ಚಾಲನೆ ನೀಡಿದರು.

ಶಿಬಿರದಲ್ಲಿ ಬಿಪಿ ಶುಗರ್, ಇಸಿಜಿ, ಎಕೋ ಮತ್ತು ಹೃದ್ರೋಗ ತಪಾಸಣಾ ನಡೆಸಲಾಯಿತು. ಸಂಸದರಾದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮೇಯರ್ ಪುಷ್ಪಲತಾ ಹಾಜರಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: