ಪ್ರಮುಖ ಸುದ್ದಿ

ವಾರ್ಷಿಕ ವರಮಾನ 1.5 ಕೋಟಿ ರೂ.ಗಳನ್ನು ಮೀರದ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ದೇಶ(ನವದೆಹಲಿ)ಸೆ.13:- ವಾರ್ಷಿಕ ವರಮಾನ 1.5 ಕೋಟಿ ರೂ.ಗಳನ್ನು ಮೀರದ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಇದು ಸ್ವಯಂಪ್ರೇರಿತ ಮತ್ತು ಕೊಡುಗೆ ಪಿಂಚಣಿ ಯೋಜನೆಯಾಗಿದ್ದು 18 ರಿಂದ 40 ವರ್ಷ ವಯಸ್ಸಿನವರು ಇದರ ಲಾಭ ಪಡೆಯಬಹುದು. ಈ ಯೋಜನೆಯಡಿ ನೊಂದಾಯಿತರಾದ ಸಣ್ಣ ವ್ಯಾಪಾರಿಗಳು ಮತ್ತು ಸ್ವ ಉದ್ಯೋಗಿಗಳಿಗೆ 60 ವರ್ಷ ದಾಟಿದ ಮೇಲೆ ಮಾಸಿಕ 3,000 ರೂ.ಗಳ ಕನಿಷ್ಠ ಆಶ್ವಾಸಿತ ಪಿಂಚಣಿಗೆ ಅವಕಾಶವಿದೆ. ಕೇಂದ್ರ ಸರ್ಕಾರವು ಮಾಸಿಕ ಕೊಡುಗೆಯಲ್ಲಿ ಶೇ.50 ರಷ್ಟು ನೀಡಲಿದ್ದು, ಉಳಿದ ಶೇ.50 ಭಾಗವನ್ನು ಫಲಾನುಭವಿಗಳು ಭರಿಸಿದ ಹಣದಿಂದ ನೀಡಲಾಗುವುದು.

“ಈ ಯೋಜನೆಯನ್ನು ರಾಷ್ಟ್ರಾದ್ಯಂತ ಜಾರಿಗೆ ತರಲಾಗಿದ್ದು, ದೇಶಾದ್ಯಂತ 3.50 ಲಕ್ಷ ಸಾಮಾನ್ಯ ಸೇವಾ ಕೇಂದ್ರ (ಸಿಎಸ್‌ಸಿ) ಮೂಲಕ ನಿರೀಕ್ಷಿತ ಫಲಾನುಭವಿಗಳಿಗೆ ನೊಂದಣಿಗೆ ಅವಕಾಶ ಮಾಡಿಕೊಡಲಾಗಿದೆ” ಎಂದು ಕೇಂದ್ರ ಸರ್ಕಾರದ ಅಧಿಕೃತ ಪ್ರಕಟಣೆ ತಿಳಿಸಿದೆ.

ಜನರು  www.maandhan.in/vyapari ವೆಬ್ಸೈಟ್ ಗೆ ಭೇಟಿ ನೀಡಿ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಅರ್ಹ ವ್ಯಾಪಾರಿಗಳು ತಮ್ಮ ಹತ್ತಿರದ ಸಿಎಸ್‌ಸಿಗಳಿಗೆ ಭೇಟಿ ನೀಡಿಯೂ ಸಹ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದು. (ಎಸ್.ಎಚ್)

Leave a Reply

comments

Related Articles

error: