ಮೈಸೂರು

ಹುಣಸೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ನಿಂದ  ಹರೀಶ್ ಗೌಡಗೆ  ಮೊದಲ ಆದ್ಯತೆ : ಮಾಜಿ ಸಚಿವ ಸಾ.ರಾ ಮಹೇಶ್

ಮೈಸೂರು,ಸೆ.13:- ಹುಣಸೂರು ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಜೆಡಿಎಸ್ ನಿಂದ  ಹರೀಶ್ ಗೌಡಗೆ  ಮೊದಲ ಆದ್ಯತೆ ನೀಡಲಾಗುತ್ತದೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು.

ಹುಣಸೂರು ಉಪ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನಿಂದ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ  ಸಂಬಂಧಿಸಿದಂತೆ ಇಂದು ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಚಿವ ಸಾ. ರಾ  ಮಹೇಶ್, ಈಗಾಗಲೇ ಹರೀಶ್ ಗೌಡರೇ ಸ್ಪರ್ಧಿ ಎಂದು ಮಾತನಾಡಿದ್ದೇವೆ,  ಅವರ ತೀರ್ಮಾನದ ನಂತರ ಯಾರನ್ನು ಆಯ್ಕೆ ಮಾಡಬೇಕೋ ಎಂದು ಚರ್ಚಿಸುತ್ತೇವೆ  ಎಂದರು.

ಮಾಜಿ ಸಚಿವ ಜಿಟಿ ದೇವೇಗೌಡರ ನೇತೃತ್ವದಲ್ಲೇ ಸಭೆ

ನಿನ್ನೆ ನಡೆದದ್ದು ಮೈಸೂರು ನಗರ ಮಟ್ಟದ ಕಾರ್ಯಕರ್ತರ ಸಭೆ,  ಇದೇ  ತಿಂಗಳ 2l ಕ್ಕೆ  ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆ ನಡೆಯಲಿದೆ.  ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ  ಜಿಲ್ಲಾ ಮಟ್ಟದ  ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ   ಭಾಗಿಯಾಗಲಿದ್ದಾರೆ,  ಅಲ್ಲದೆ ಜಿಲ್ಲೆಯ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಸೇರಿದಂತೆ  ಎಲ್ಲಾ ಕಾರ್ಯಕರ್ತರು ಬರಲಿದ್ದಾರೆ. ಈ  ಸಭೆ  ಮಾಜಿ ಸಚಿವ ಜಿ.ಟಿ. ದೇವೇಗೌಡರ  ನೇತೃತ್ವದಲ್ಲೇ ನಡೆಯಲಿದೆ.  ಅವರನ್ನು ನಾವೇ ಸ್ವತಃ ಆಹ್ವಾನ ಮಾಡ್ತೇವೆ ಎಂದು ಮಾಜಿ ಸಚಿವ ಸಾ.ರಾ ಮಹೇಶ್ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: